ಗ್ರಾ.ಪಂ. ಸದಸ್ಯರೂ ಆಗದ ಬಿಜೆಪಿ ಅಧ್ಯಕ್ಷರಿಗೇನು ಗೊತ್ತು ಅಭಿವೃದ್ಧಿಯ ಗುಟ್ಟು : ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ನನ್ನ ಅಧಿಕಾರ ಅವಧಿಯಲ್ಲಿ ನಾನು ಪುರಸಭಾ ವ್ಯಾಪ್ತಿಯ ಅಭಿವೃದ್ಧಿಗೆ ನೂರೈವತ್ತು ಕೋಟಿ ರೂಪಾಯಿ ತಂದಿರುವುದು ಸುಳ್ಳು ಎಂಬುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಒಂದು ಗ್ರಾ.ಪಂ. ಚುನಾವಣೆಯನ್ನೂ ಎದುರಿಸದ ಅವರಿಗೇನು ಗೊತ್ತು ಅಭಿವೃದ್ಧಿ ಗುಟ್ಟು, ಶಾಸಕರಾಗಿ ನಾನು ತಂದ ಅನುದಾನದ ಬಗ್ಗೆ ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸುವುದಿದ್ದರೆ ನಾನು ಸಿದ್ಧ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸವಾಲು ಹಾಕಿದ್ದಾರೆ.



ಕಾಪು ರಾಜೀವ ಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಚುನಾವಣೆಯಲ್ಲಿ ನಮಗೆ ಸಿಕ್ಕಿದ ಮತ 5009, ಬಿಜೆಪಿ 5407 ಮತ, 398 ಮತ ಹೆಚ್ಚು ಪಡೆದಿದ್ದಾರೆ ಅಷ್ಟೇ. ಅದು ಕೂಡಾ ಗುತ್ತಿಗೆದಾರರು ಪ್ರಧಾನ ಮಂತ್ರಿಗೆ ದೂರಿನ ಪ್ರಕಾರ 40% ಕಮಿಷನ್ ಪಡಿದಿರುವ ಒಂದಿಷ್ಟನ್ನು ಮನೆಯೊಂದಕ್ಕೆ ಮೂರು ಸಾವಿರ ರೂಪಾಯಿಯಂತೆ ಹಂಚಿ ಕೆಲ ಮತದಾರರನ್ನು ಖರೀದಿ ಮಾಡಿದ್ದಾರೆ, ಚುನಾವಣೆಯ ಸಂದರ್ಭ ಅವರು ಮತದಾರರಿಗೆ ನೀಡಿದ ಪ್ರಣಾಳಿಕೆ ನಮ್ಮಲ್ಲಿದೆ, ವಿರೋಧ ಪಕ್ಷವಾಗಿ ನಾವು ಎಲ್ಲವನ್ನೂ ಗಮನಿಸುತ್ತೇವೆ, 1100 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆಯಾಗಿರಬಹುದು, ಪ್ರಧಿಕಾರ ರದ್ದು ಮಾಡುವುದು ಆಗಿರಬಹುದು, ಹೆಚ್ಚು ಮಾಡಲಾದ ಮೂರು ಪಟ್ಟು ತೆರಿಗೆ ಇಳಿಕೆ ಮಾಡುವುದು ಆಗಿರಬಹುದು, ಅವರಿಗೆ ಸಮಾಯಾವಕಾಶ ನೀಡುತ್ತೇವೆ ಹೇಳಿದ್ದನ್ನು ಮಾಡದೇ ಇದ್ದಲ್ಲಿ ವಿರೋಧಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಾಹಿಸಿ ಜನರ ಹಿತಕ್ಕಾಗಿ ಪ್ರತಿಭಟನೆ, ಸತ್ಯಾಗ್ರಹವನ್ನು ಮಾಡಲೂ ನಾವು ಸಿದ್ಧ ಎಂದಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಹರೀಶ್ ನಾಯಕ್, ನವೀನ್ಚಂದ್ರ ಸುವರ್ಣ, ಬಾಬಣ್ಣ ಮುಂತಾದವರಿದ್ದರು.