ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾದ ತೀರ್ಥೇಶ್ ಅಮೈ ಅವರಿಗೆ ಪದೋನ್ನತಿ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಡಬ ಘಟಕದ ಪ್ರಭಾರಘಟಕಾಧಿಕಾರಿಯಾದ (ಸಾರ್ಜೆಂಟ್) ತೀರ್ಥೇಶ್ ಅಮೈ, ಮೆಟಲ್ ನಂ 489, ಇವರುಪ್ರಭಾರ ಘಟಕಾಧಿಕಾರಿಯಾಗಿದ್ದು, ಗೃಹರಕ್ಷಕದಳದಲ್ಲಿ ದಿನಾಂಕ 01-04-1997 ರಂದು ಸೇವೆಗೆ ಸೇರಿದ್ದು, ಸುಮಾರು 24 ವರ್ಷಗಳಿಂದ ಸೇವೆಯನ್ನುಸಲ್ಲಿಸುತ್ತಿದ್ದಾರೆ. ಕೇಂದ್ರ ಕಛೇರಿಯಿಂದ ಲೀಡರ್ ಶಿಪ್ ತರಬೇತಿ, ರೈಫಲ್,ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ತರಬೇತಿ ಹಾಗೂ ಮಂಗಳೂರಿನಲ್ಲಿ ನಡೆದಪ್ರಥಮ ಚಿಕಿತ್ಸೆ ತರಬೇತಿ, ಮೂಲ ಅಗ್ನಿ ಶಮನ ತರಬೇತಿ, ಪ್ರವಾಹ ರಕ್ಷಣಾತರಬೇತಿಗಳನ್ನು ಪಡೆದಿರುತ್ತಾರೆ.

ಇವರು ಅಗ್ನಿಶಾಮಕ ಕರ್ತವ್ಯ,ಪ್ರವಾಹ ರಕ್ಷಣಾ ಕರ್ತವ್ಯ, ರೈಲ್ವೆ ಕರ್ತವ್ಯ, ಪೊಲೀಸ್ ಠಾಣಾ ಕರ್ತವ್ಯ,ಚುನಾವಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯ ಹಾಗೂ ಕೋವಿಡ್ ಕರ್ತವ್ಯಗಳಲ್ಲಿಪೂರ್ಣಪ್ರಮಾಣ ತೊಡಗಿಸಿಕೊಂಡಿರುತ್ತಾರೆ. ಇವರ ಸೇವಾ ಹಿರಿತನ ಮತ್ತುದಕ್ಷತೆಯನ್ನು ಆಧರಿಸಿ ಇವರಿಗೆ ಪದೋನ್ನತಿ ನೀಡಲು ಮಾನ್ಯ ಡಿಜಿಪಿ ಅವರುಶಿಫಾರಸ್ಸು ಮಾಡಿರುತ್ತಾರೆ. ಇದೀಗ ಮಾನ್ಯ ಡಿಜಿಪಿ ಅವರ ಆದೇಶ ಮತ್ತುಅನುಮತಿಯೊಂದಿಗೆ ತೀರ್ಥೇಶ್ ಅವರಿಗೆ ಪೂರ್ಣ ಪ್ರಮಾಣದ ಪದೋನ್ನತಿಸಲ್ಲಿಸಲಾಗಿದೆ.

ಇವರ ಈ ಸೇವೆಗೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ಚೂಂತಾರು ಅವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಕಛೇರಿಯಿಂದ ದೊರೆತ ಪೂರ್ಣಪ್ರಮಾಣದ ಘಟಕಾಧಿಕಾರಿ (ಫ್ಲಟೂನ್ ಕಮಾಂಡರ್) ಹುದ್ದೆಯ ಪದೋನ್ನತಿಪ್ರಮಾಣ ಪತ್ರವನ್ನು ದಿನಾಂಕ : 04-01-2022ನೇ ಮಂಗಳವಾರದಂದುಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರುಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಛೇರಿಯ ಪ್ರಥಮ ದರ್ಜಿ ಸಹಾಯಕಿಶ್ರೀಮತಿ ಅನಿತಾ ಟಿ.ಎಸ್, ಕಡಬ ಘಟಕದ ಗೃಹರಕ್ಷಕರಾದ ರವಿ, ಉಮೇಶ್, ಪವಿತ್ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸುಲೋಚನ,ಜಯಲಕ್ಷ್ಮಿ, ಮಹೇಶ್ ಪ್ರಸಾದ್ ಹಾಗೂ ದುಷ್ಯಂತ್ ರೈ ಉಪಸ್ಥಿತರಿದ್ದರು

Related Posts

Leave a Reply

Your email address will not be published. Required fields are marked *

How Can We Help You?