ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದವರ ಮೇಲೆ ದಂಡ

ರಾತ್ರಿ ವೇಳೆ ಅಕ್ರಮವಾಗಿ ಕಸ ಎಸಯುತ್ತಿದ್ದ ಗಾಡಿಗೆ 5000 ರೂ. ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಂಡ ಘಟನೆ ನಡೆದಿದೆ.ಹಲವಾರು ದಿನಗಳಿಂದ ಬಂಗ್ರಕೂಳೂರು ಗೋಲ್ಡ್ ಫಿಂಚ್ ಮೈದಾನದ ಎದುರು ಕಡೆ ಇರುವ ಸರಕಾರಿ ಖಾಲಿ ಜಾಗದಲ್ಲಿ ಲಾರಿ, ಪಿಕಪ್ ಗಳ ಮೂಲಕ ಕಸ ಮತ್ತು ಇತರ ತ್ಯಾಜ್ಯಗಳನ್ನು  ರಾತ್ರಿ ವೇಳೆ ಎಸೆದು ಹೋಗುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಮ.ನ.ಪಾ ಸದಸ್ಯರು ಹಾಗು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಮ. ನ. ಪಾ ದ ಆಯುಕ್ತರು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದರಾದರೂ ರಾತ್ರಿ ವೇಳೆ ಕದ್ದು ಮುಚ್ಚಿ ಕಸ ಎಸೆದು ಹೋಗುವವರನ್ನು ತಡೆಯುವುದು ಕಷ್ಟ ಸಾಧ್ಯವಾಗಿತ್ತು.

ಆದ್ದರಿಂದ ಸ್ಥಳೀಯ ಮ. ನ.ಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಮತ್ತು ಸ್ಥಳೀಯ ನಾಗರಿಕರೇ ರಾತ್ರಿ ವೇಳೆ ಕಾದು ಕುಳಿತು ಕಸ ಎಸೆಯಲು ಬಂದ ಪಿಕಪ್ ವಾಹನವನ್ನು ತಡೆದು ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಆಯುಕ್ತರು ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ವಾಹನಕ್ಕೆ 5000 ರೂ ದಂಡವನ್ನು ವಿಧಿಸಿದ್ದಾರೆ ಮತ್ತು ಇನ್ನೊಮ್ಮೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ವಾಹನವನ್ನೇ ಸೀಸ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?