ವಿಷ್ಣು ಸೇನಾ ಸಮಿತಿ ಮಂಜೇಶ್ವರ ವತಿಯಿಂದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ

ಮಂಜೇಶ್ವರ: ಕರ್ನಾಟಕ ಹಾಗು ಕಾಸರಗೋಡು ಜಿಲ್ಲೆಯ ಕೊಟ್ಯಾಂತರ ಅಭಿಮಾನಿಗಳ ಪಾಲಿನ ಹೆಮ್ಮೆಯ ಸುಪ್ರಸಿದ್ದ ನಾಯಕ ನಟ ಅಭಿನವ ಭಾರ್ಗವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಹನ್ನೆರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವಿಷ್ಣು ಸೇನಾ ಸಮಿತಿ ಮಂಜೇಶ್ವರ ತಾಲೂಕು ಸಮಿತಿ ವತಿಯಿಂದ ಮಂಜೇಶ್ವರದಲ್ಲಿ ಹಮ್ಮಿಕೊಳ್ಳಲಾಯಿತು.

ವಿಷ್ಣು ಸೇನಾ ಸಮಿತಿ ಮಂಜೇಶ್ವರ ತಾಲೂಕು ಅಧ್ಯಕ್ಷ ನೌಫಲ್ ತೂಮಿನಾಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ತಾಲೂಕು ಸಮಿತಿ ಉಪಾಧ್ಯಕ್ಷ ನಾಗೇಶ್ ವಿ.ಎಂ ಅಂಗಡಿ ಪದವು ಅನುಸ್ಮರಣಾ ಬಾಷಣ ಮಾಡಿದರು.ಸಂಘಟನೆಯ ಸದಸ್ಯರಾದ ಚಂದ್ರಹಾಸ ನಾಯಕ್, ಶೈಲಜಾ ಸಿ ನಾಯಕ್, ನರಹರಿ ನಾಯ್ಕ್, ಮೊಹಮ್ಮದಲಿ ಅಲಿ, ಹೈದರಾಲಿ, ಮೊದಲಾದವರು ಪಾಲ್ಗೊಂಡರು.

Related Posts

Leave a Reply

Your email address will not be published.

How Can We Help You?