ಮಂಜೇಶ್ವರ : ಸರಿಯಾದ ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕುಟುಂಬ

ಮಂಜೇಶ್ವರ: ಸರಕಾರದ ವತಿಯಿಂದ ನೀಡಲಾದ ಭೂಮಿಯಲ್ಲಿ ಮನೆ ಕಟ್ಟಿ ಕುಳಿತ ಕುಟುಂಬ ಇದೀಗ ಸರಿಯಾದ ರಸ್ತೆ ಇಲ್ಲದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಮಂಜೇಶ್ವರ ಗ್ರಾ. ಪಂ. ಐದನೇ ವಾರ್ಡ್ ವ್ಯಾಪ್ತಿಯಲ್ಲಿರುವ ಬಾಚಲಿಕೆಯ ಬೋಳ್ನಾಡ್  ಎಂಬಲ್ಲಿ  ಸರಕಾರದ ಭೂಮಿಯಲ್ಲಿ ಮನೆ ಕಟ್ಟಿ ಕುಳಿತ ಕುಟುಂಬಕ್ಕೆ ಸುಮಾರು ಅರ್ಧ ಕಿಲೋ ಮೀಟರಿನಷ್ಟು ಸರಿಯಾದ ರಸ್ತೆ ವ್ಯವಸ್ಥೆ ಇಲದೆ ಪರಿತಪಿಸುವಂತಾಗಿದೆ. ಸರಿಯಾಗಿ ನಡೆದಾಡಲು  ಕೂಡಾ  ರಸ್ತೆಯಲ್ಲಿ ಇಲ್ಲಿ ವಾಸಿಸಿರುವ ಕುಟುಂಬಗಳು  ಆವಶ್ಯಕ್ಕೆ ವಾಹನವನ್ನು ಬಿಡಿ ಕಾಲ್ನಡಿಗೆಯಲೇ ಸಾಗುವುದು ಕಷ್ಟಕರವಾಗಿದೆ. ಇಲ್ಲಿಗೊಂದು ರಸ್ತೆಯನ್ನು ನಿರ್ಮಿಸುವಂತೆ ಜನಪ್ರತಿನಿಧಿಗಳಲ್ಲಿ ಹಲವಾರು ಸಲ ಬೇಡಿಕೊಂಡರೂ ಯಾರು ಇತ್ತ ಕಡೆ ತಿರುಗಿಯೂ ನೋಡುವುದಿಲವೆಂಬುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.

 ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಬಾಚಲಿಕೆ ಯಿಂದ ಬೊಲ್ನಾಡು ತನಕ ಇರುವ ಅರ್ಧ ಕಿಲೋ ಮೀಟರ್ ಹೊಂಡಗಳಿಂದ ತುಂಬಿದ ರಸ್ತೆಯನ್ನು ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?