ಮೇಕೆದಾಟು ಹೋರಾಟ ನಮ್ಮ ನೀರು-ನಮ್ಮ ಹಕ್ಕಿಗಾಗಿ ಪಾದಯಾತ್ರೆ : ಐವನ್ ಡಿಸೋಜಾ

ಮೇಕೆದಾಟು ಹೋರಾಟ ನಮ್ಮ ನೀರು-ನಮ್ಮ ಹಕ್ಕಿಗಾಗಿ ನಡೆಯುವ ಪಾದಯಾತ್ರೆ ಹೊರತು ರಾಜಕೀಯ ದುರುದ್ದೇಶಕ್ಕಾಗಿ ಹೋರಾಟ ಮಾಡುವುದಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸಮುದ್ರ ಸೇರುತ್ತಿರುವ ಕಾವೇರಿ ನೀರು ಉಳಿಸಲು 60ಟಿಎಂಸಿ ನೀರು ಸಂಗ್ರಹಿಸಿಲು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು, ಜಲಾಯನ ಪ್ರದೇಶದ ನೀರಿನ ಹಕ್ಕನ್ನು ಸಂರಕ್ಷಿಸಲು 7 ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು 5900 ಕೋಟಿ ರೂಪಾಯಿಗಳ ಡಿಪಿಆರ್‍ನ್ನು ರಚಿಸಿ ಪ್ರಸ್ತುತ ಅದು 9 ಸಾವಿರಕೋಟಿ ರೂಪಾಯಿಗಳ ಯೋಜನೆಯಾಗಿದ್ದು, ನಮ್ಮ ರಾಜ್ಯದ ಜನರ ಹಿತದೃಷ್ಠಿಯಿಂದ ಮಾಡುತ್ತಿರುವ ಪಾದಯಾತ್ರೆಗೆ ಬಿಜೆಪಿಯ ಅಡ್ಡಿಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ಹಕ್ಕುಗಳಿಗಾಗಿ ಹೋರಾಟ ಮಾಡುವ ಬಿಜೆಪಿ ಸರ್ಕಾರ ಕೋವಿಡ್ ಮತ್ತು ಒಮಿಕ್ರಾನ್‍ನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುವ ಹೋರಾಟಕ್ಕೆ ಮಾತ್ರ ಕೋವಿಡ್ ನಿಯಮಗಳು, ಬಿಜೆಪಿ ಮತ್ತು ಸರ್ಕಾರ ನಡೆಸುವ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧನೆ ಇಲ್ಲ ಎನ್ನುತ್ತಿರುವುದು, ಹೋರಾಟ ಹತ್ತಿಕ್ಕುವ ಕ್ರಮವಲ್ಲವೇ ಎಂದು ಹೇಳಿದರು.

ರಾಜ್ಯ ಸರ್ಕಾರದ ಮೇಲೆ ಭದ್ರತಾ ಲೋಪ ಮತ್ತು ಮೋದಿ ಹತ್ಯೆಗೆ ಸಂಚು ಎಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರು ಮೊಸಳೆ ಕಣ್ಣೀರು ಸುರಿಸುವುದು ನಾಚಿಕೆಗೇಡಿನ ಸಂಗತಿ. ಪ್ರಧಾನಮಂತ್ರಿಯವರ ಕಾರ್ಯಕ್ರಮ ಮತ್ತು ಭದ್ರತೆಗೆ ಡಬಲ್ ಚೆಕಿಂಗ್ ಇರುವುದರಿಂದ ರೈತರು ನಡೆಸುವ ಪ್ರತಿಭಟನೆ ಹಿಂದೆ ನಡೆಸಿಕೊಂಡು ಬಂದಿರುವುದರಿಂದ ಪ್ರಧಾನ ಮಂತ್ರಿಗಳು ಈ ರಸ್ತೆಯಲ್ಲಿ ತೆರಳುವ ಸಂದರ್ಭ ರೈತರ ಜೊತೆ ಮಾತನಾಡಿ, ಸಾಂತ್ವಾನ ಹೇಳುವುದನ್ನು ಬಿಟ್ಟು, ಬಿಜೆಪಿ ನಾಯಕರು ಪ್ರಧಾನಿ ಮಂತ್ರಿಯವರು 20 ನಿಮಿಷಗಳ ಕಾಲ ರಸ್ತೆಯಲ್ಲಿ ಕಾದಿರುವುದಕ್ಕೆ ಮೊಸಳೆ ಕಣ್ಣೀರು ಸುರಿಸುವುದು ಯಾಕೆ..? ಈ ಬಗ್ಗೆ ಭದ್ರತೆಯ ಬಗ್ಗೆ ಲೋಪದೋಷಗಳು ಇದ್ದಲ್ಲಿ ತನಿಖೆ ನಡೆಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ. ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಎಲ್ಲರಿಗೂ ಗೌರವವಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Related Posts

Leave a Reply

Your email address will not be published.

How Can We Help You?