ಆಟೋಗೆ ಢಿಕ್ಕಿಯಾದ ಟ್ರಕ್: ಪರಾರಿಯಾಗಲು ಯತ್ನಿಸಿದ ಸುಜ್ಲಾನ್ ಬ್ಲೇಡ್ ಸಾಗಾಟ ವಾಹನ ಚಾಲಕ

ಅಟೋ ರಿಕ್ಷಾವೊಂದಕ್ಕೆ ಸವರಿಕೊಂಡು ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಲೆತ್ನಿಸಿದ ವಾಹನವನ್ನು ತಡೆದ ವ್ಯಕ್ತಿಗೆ ಜಾಕ್ ರಡ್ ನಿಂದ ಹಲ್ಲೆಗೆ ಮುಂದಾದ ಸುಜ್ಲಾನ್ ಬ್ಲೇಡ್ ಸಾಗಾಟ ವಾಹನದ ಚಾಲಕ-ನಿರ್ವಾಹಕ ಸೇರಿ ಮೂವರಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿ ನಡೆದಿದೆ.

ರಾಡ್‌ನಿಂದ ಹಲ್ಲೆ ನಡೆಸಲು ಮುಂದಾಗಿ ಸಾರ್ವಜನಿಕರಿಂದ ಥಳಿತಕ್ಕೊಳಗಾದವರು ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್, ಮಾನ್ ಸಿಂಗ್ ಹಾಗೂ ನಿಹಾಲ್ ಸಿಂಗ್. ಇವರು ಪಡುಬಿದ್ರಿಯ ಸುಜ್ಲಾನ್ ಕಂಪನಿಯಿoದ ಬ್ಲೇಡ್ ಸಾಗಿಸಲು ಬೃಹತ್ ಟ್ರಕ್ ನಲ್ಲಿ ಕಂಪನಿ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಟೋಗೆ ಡಿಕ್ಕಿ ಮಾಡಿ ಮುಂದೋಡಿದ ಟ್ರಕ್ ನ್ನು ನಿಲ್ಲಿಸಿದ ಸ್ಥಳೀಯ ನಿವಾಸಿ ಯುವರಾಜ್ ಎಂಬವರು ಚಾಲಕನಲ್ಲಿ ಮಾತನಾಡುತ್ತಿದಂತೆ ನಿರ್ವಾಹಕ ರಾಡಿನಿಂದ ಹಲ್ಲೆಗೆ ಮುಂದಾಗಿದ್ದು, ಆ ಸಂದರ್ಭ ಚಾಲಕ ಸಹಿತ ಮತ್ತೋರ್ವ ಕೂಡಾ ಆತನಿಗೆ ಸಹಕರಿಸುತ್ತಿದಂತೆ ಇದನ್ನು ಗಮನಿಸುತ್ತಿದ್ದ ಸಾರ್ವಜನಿಕರು ಮೂವರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

Related Posts

Leave a Reply

Your email address will not be published. Required fields are marked *

How Can We Help You?