ಮಂಗಳೂರಿನ ಚಿಲಿಂಬಿ ಗುಡ್ಡೆಯ ಶ್ರೀರಾಮಾಂಜನೇಯ ಯುವಕ ಮಂಡಲ(ರಿ) : ಅಂಜನೇಯನ ನೂತನ ರಜತ ಭಾವಚಿತ್ರದ ಪ್ರತಿಷ್ಠಾಪನೆ

ಮಂಗಳೂರಿನ ಚಿಲಿಂಬಿ ಗುಡ್ಡೆಯ ಶ್ರೀರಾಮಾಂಜನೇಯ ಯುವಕ ಮಂಡಲದ 35ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಅಂಜನೇಯನ ನೂತನ ರಜತ ಭಾವಚಿತ್ರದ ಪ್ರತಿಷ್ಠಾಪನೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತ್ತು.

ಮುಂಜಾನೆ ಗಣಹೋಮ ನವಕ ಪ್ರಧಾನ, ಪ್ರತಿಷ್ಠಾ ಕಲಶ ಪೂಜೆ, ನಡೆದವು, ಗುರುವಾರ ಮುಂಜಾನೆ ಕೋಡಿಕಲ್ ವೇದ ಮೂರ್ತಿ ಶ್ರೀ ವಿಶ್ವಕುಮಾರ್ ಜೋಯಿಸರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಶ್ರೀ ಅಂಜನೇಯ ರಜತ ಭಾವಚಿತ್ರದ ಪ್ರತಿಷ್ಠೆ ನೆರವೇರಿದವು.

ಇದೇ ವೇಳೆ ಶ್ರೀ ರವಿ ಶಂಕರ್ ಗುರೂಜಿಯವರ ವ್ಯಕ್ತಿತ್ವ ವಿಕಸನ ಸಂಸ್ಥೆಯ ಶಿಕ್ಷಕಿ ಸುರೇಖ ಆರ್.ಹೆಗ್ಡೆ ಅವರು ಗಣ್ಯರು ಜೊತೆಯಾಗಿ ದೀಪ ಬೆಳಗಿಸಿದರು. ಈ ವೇಳೆ ಮಾತನಾಡಿದ ಶಿಕ್ಷಕಿ ಸುರೇಖ ಆರ್.ಹೆಗ್ಡೆ, ಶ್ರೀರಾಮಾಂಜನೇಯ ಯುವಕ ಮಂಡಲ ಮಂಗಳೂರಿಗೆ ಮಾತ್ರವಲ್ಲದೇ ದೇಶಕ್ಕೆ ಮಾದರಿ ಆಗಲಿ ಎಂದು ಶುಭಾ ಹಾರೈಸಿದರು.

ತದ ಬಳಿಕ ಕೋಡಿಕಲ್ ವೇದ ಮೂರ್ತಿ ಶ್ರೀ ವಿಶ್ವಕುಮಾರ್ ಜೋಯಿಸರು ಮಾತನಾಡಿ, ಶ್ರೀರಾಮಾಂಜನೇಯ ಯುವಕ ಮಂಡಲದ ಒಗ್ಗಟ್ಟು ಎಲ್ಲಿಯೂ ಇಲ್ಲ, ಇಲ್ಲಿ ವಿದ್ಯಾಮಾರ್ಗ, ಜ್ಞಾನ ಮಾರ್ಗ,ಶ್ರದ್ಧಾಮಾರ್ಗ, ಭಕ್ತಿ ಮಾರ್ಗವನ್ನ ತೋರಿಸುವ ಕೇಂದ್ರವಾಗಿದೆ ಎಂದು ಅವರು ಹೇಳಿದರು.

ವಕೀಲರಾದ ವಾಸುದೇವಗೌಡ ಮಾತನಾಡಿ, ಸಂಸ್ಕಾರಯುಕ್ತ ಸಮಾಜ ನಿರ್ಮಾಣಕ್ಕೆ ಯುವಕ ಮಂಡಲ ಕಾರ್ಯಪ್ರವೃತ್ತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಈ ವೇಳೆ ಚರಿತ್ ಪೂಜಾರಿ, ಗೌರವಾಧ್ಯಕ್ಷ ಗುರುದತ್ತ್ ಕೋಟ್ಯಾನ್, ಅಧ್ಯಕ್ಷ ದಿನೇಶ್, ಉಪಧ್ಯಕ್ಷ ಚಿರಂಜೀವಿ, ಮಹಿಳಾ ಉಪಾಧ್ಯಕ್ಷ ವಿಜಯಲಕ್ಷ್ಮೀ, ಕಾರ್ಯದರ್ಶಿ ಶ್ಯಾಂ ಸುಂದರ್, ಉಪ ಕಾರ್ಯದರ್ಶಿ ಪವನ್ ರಾಜ್, ಮಹಿಳಾ ಸಂಘಟನಾ ಕಾರ್ಯದರ್ಶಿ ವತ್ಸಲಾ ನಾಗೇಂದ್ರ ಸೇರಿದಂತೆ ಸೇರಿದಂತೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು

Related Posts

Leave a Reply

Your email address will not be published. Required fields are marked *

How Can We Help You?