ಪಡುಬಿದ್ರಿಯ ಕಟ್ಟಡ ಹೋಟೆಲುಗಳ ತ್ಯಾಜ್ಯ ನೀರು ಚರಂಡಿಗೆ : ಎಚ್ಚರಿಕೆ ನೀಡಿದ ಗ್ರಾಮ ಪಂಚಾಯತ್

ಪಡುಬಿದ್ರಿಯ ಹೆದ್ದಾರಿ ಪಕ್ಕದ ಕಟ್ಟಡಗಳು ಸಹಿತ ಹೋಟೆಲುಗಳು ಮಳೆನೀರು ಹರಿದು ಹೋಗುವ ಚರಂಡಿಗೆ ಬಾತ್ ರೂಮ್ ತ್ಯಾಜ ನೀರನ್ನು ಹರಿಯ ಬಿಡುವುದರಿಂದ ಇಡೀ ಪ್ರದೇಶ ಗಬ್ಬೇದ್ದು ನಾರುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಗ್ರಾ.ಪಂ. ಕಾರ್ಯಚರಿಸಿ ತ್ಯಾಜ್ಯ ನೀರು ಬಿಡುತ್ತಿರುವವರಿಗೆ ಎಚ್ಚರಿಕೆ ಸಹಿತ ಒಂದು ವಾರದ ಗಡುವು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಮಾತನಾಡಿ, ಪೇಟೆ ಸಮೀಪದ ಹೋಟೆಲ್‍ಗಳು ಹಾಗೂ ಕೇರಿ ಪ್ರದೇಶದ ಮನೆ ಮಂದಿಗಳು ತಮ್ಮ ಬಾತ್ ರೂಮ್ ಗಳ ತ್ಯಾಜ್ಯ ನೀರನ್ನು ನೇರವಾಗಿ ಪೈಪ್ ಗಳ ಮೂಲಕ ಮಳೆನೀರು ಹರಿದು ಹೋಗುವ ಚರಂಡಿಗೆ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ.

padubidre

ದೂರಿನನ್ವಯ ಗ್ರಾ.ಪಂ. ಪಿಡಿಓ ಸಹಿತ ಸಿಬ್ಬಂದಿಗಳನ್ನು ಸೇರಿಸಿಕೊಂಡು ಕಾರ್ಚರಣೆ ನಡೆಸಿ ಪೈಪ್ ಅಳವಡಿಸಲಾಗಿದ್ದ ಮನೆಮಂದಿ ಹಾಗೂ ಕಟ್ಟಡ ಮಾಲಿಕರಿಗೆ ಎಚ್ಚರಿಕೆ ನೀಡಿದ್ದು ಒಂದು ವಾರದಗಡುವು ನೀಡಲಾಗಿದೆ ಎಂದರು. ಈ ಸಂದರ್ಭ ಪಿಡಿಓ ಪಂಚಾಕ್ಷರೀ ಹೀರೆಮಟ್ಚ, ಸಿಬ್ಬಂದಿ ಹಾಜರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?