ನಾರ್ಕೋಡು-ಕನ್ನಡಿತೋಡು ರಸ್ತೆ ಅಗಲೀಕರಣಕ್ಕೆ ತೊಡಕು: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ, ಸಮಸ್ಯೆ ಬಗೆಹರಿಸುವ ಭರವಸೆ

ಸುಳ್ಯ: ಸುಳ್ಯ ತಾಲೂಕಿನ ನಾರ್ಕೋಡು-ಕನ್ನಡಿತೋಡು ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಸುಮಾರು 7 ಕಿಲೋಮೀಟರ್‍ನಷ್ಟು ಉದ್ದದ ರಸ್ತೆಯು ಅರಣ್ಯ ಇಲಾಖೆಯ ವ್ಯಾಪ್ತಿಯೊಳಗೆ ಹಾದು ಹೋಗುತ್ತಿದೆ. ಇದು ರಸ್ತೆಯ ಅಗಲೀಕರಣಕ್ಕೆ ತಾಂತ್ರಿಕ ಅಡಚಣೆಯಾಗಿರುವುದರಿಂದ ಅದನ್ನು ನಿವಾರಿಸುವ ಉದ್ದೇಶದಿಂದ ಇಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ದಿನೇಶ್ ಕುಮಾರ್ ಅವರು ಹಾಗೂ ಸುಳ್ಯ ತಾಲೂಕಿನ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಇಲ್ಲಿಯ ಪ್ರಮುಖ ಸಮಸ್ಯೆಯ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಧರ್ಮಪಾಲ ಕೊೈಂಗಾಜೆ, ಗೀತಾ ಕೋಲ್ಚಾರ್ ಮತ್ತು ಸಾರ್ವಜನಿಕರು ವಿವರಿಸಿದರು. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಕೊಡುವುದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲ ಮೂಸ, ಮನೋಹರ್ ಕಾರ್ತಡ್ಕ, ಮಹಮ್ಮದ್ ಮದೀನ, ಶಾಫಿ, ಅಂದುಮಾನ್, ಮುಝಾಮಿಲ್, ಝಕಾರಿಯ, ಉಮ್ಮರ್, ನಿಸಾರ್, ರಫೀಕ್, ಶರೀಫ್, ಶಾಹಿದ್, ಫೈಝಲ್, ಅಬೂಬಕ್ಕರ್ ಕೆಕೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?