ವಿಟ್ಲದಲ್ಲಿ ವೀಕೆಂಡ್ ಕರ್ಫ್ಯೂ ಭಾಗಶಃ ಯಶಸ್ವಿ

ವಿಟ್ಲ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಜನ ಮತ್ತು ವಾಹನ ಸಂಚಾರ ಎಂದಿನಂತಿದೆ.

ವಿಟ್ಲ ಪೇಟೆಯಲ್ಲಿ ಬೆಳಿಗ್ಗೆ ನಿಂದಲೇ ಎಲ್ಲಾ ಅಂಗಡಿಗಳ ಮಾಲಕರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. 11 ಗಂಟೆ ಬಳಿಕ ವ ವಿಟ್ಲ ಪೊಲೀಸರು ಪೇಟೆಗೆ ಆಗಮಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು. ಬಸ್, ಕಾರು, ಆಟೋ ರಿಕ್ಷಾ ಮತ್ತು ಇನ್ನಿತರ ಖಾಸಗಿ ವಾಹನಗಳ ಸಂಚಾರ ಎಂದಿನಂತಿದೆ.

vitla curfew

ಅಗತ್ಯ ವಸ್ತುಗಳಾದ ತರಕಾರಿ, ಹಾಲು, ದಿನಸಿ, ಮೆಡಿಕಲ್ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಜನರು ಆಗಮಿಸಿ ವಸ್ತುಗಳನ್ನು ಖರೀದಿಸಿದರು. ಪೊಲೀಸರು ಪೇಟೆಯಿಂದ ನಿರ್ಗಮಿಸಿದ ಬಳಿಕ ಕೆಲ ಬೆರಳೆಣಿಯಷ್ಟು ಅಂಗಡಿಗಳು ಅರ್ಧ ಬಾಗಿಲು ಹಾಕಿದ್ದು,  ಇನ್ನೂ ಕೆಲವರು ಸಂಪೂರ್ಣವಾಗಿ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

Related Posts

Leave a Reply

Your email address will not be published.

How Can We Help You?