ನೆನೆಗುದಿಗೆ ಬಿದ್ದ ಹೈವೇ ವಿಸ್ತರಣೆ: ಮೂಡುಬಿದಿರೆಯಿಂದ ಮಂಗಳೂರಿಗೆ ಪಾದಯಾತ್ರೆ: ಅಭಯಚಂದ್ರ ಜೈನ್

ಮೂಡುಬಿದಿರೆ: ದ.ಜಿಲ್ಲೆಯಲ್ಲಿ ಇತ್ತೀಚಿಗೆ ಚಾಲನೆ ಪಡೆದ ಬಿ.ಸಿ.ರೋಡ್ ಚಿಕ್ಕ ಮಗಳೂರು ಹೈವೇ ವಿಸ್ತರಣೆ ಕಾಮಗಾರಿಯೂ ವೇಗವಾಗಿ ನಡೆದಿದೆ. ಆದರೆ ಮೂಡುಬಿದಿರೆ ಮಂಗಳೂರು ಹೈವೇ ವಿಸ್ತರಣೆ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕೃಷಿ ಭೂಮಿ ಸಂತ್ರಸ್ತರಿಗೂ ಸೂಕ್ತವಾದ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ಸಂತ್ರಸ್ತರು, ವಾಹನ ಸವಾರರು ಎಲ್ಲರೂ ವರ್ಷಗಳಿಂದ ಕಷ್ಟಪಡುವಂತಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಇನ್ನೊಂದು ತಿಂಗಳೊಳಗೆ ಸಂಬಂಧ ಪಟ್ಟವರು ಸಮಸ್ಯೆಗೆ ಸ್ಪಂದಿಸದಿದ್ದರೆ ಸಮಾನ ಮನಸ್ಕರು, ಸಂತ್ರಸ್ತರನ್ನು ಕೂಡಿಕೊಂಡು ಮೂಡುಬಿದಿರೆಯಿಂದ ಮಂಗಳೂರಿಗೆ ಪಾದಯಾತ್ರೆ ನಡೆಸಲಿರುವುದಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಘೋಷಿಸಿದ್ದಾರೆ.

ಮೂಡುಬಿದಿರೆಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಕ್ಕಾಲು ಗಂಟೆಯಲ್ಲಿ ಮೂಡುಬಿದಿರೆಯಿಂದ ಮಂಗಳೂರಿಗೆ ತಲುಪಬೇಕಾದವರು ಈಗ ಒಂದೂಕಾಲು ಗಂಟೆ ಚಡಪಡಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಜನಪ್ರತಿನಿಧಿಗಳೆ ಹೊಣೆ ಎಂದವರು ಹೇಳಿದರು. ಇನ್ನೊಂದೆಡೆ ಭೂಮಿಯ ಕನ್ವರ್ಷನ್‌ಗೆ ಕಂದಾಯ ಇಲಾಖೆಯ ಮೂಲಕ ಅಡ್ಡ ದಾರಿಯಲ್ಲಿ ಕಳ್ಳದಂಧೆಗೂ ಹೈವೇ ಕಾಮಗಾರಿ ವಿಳಂಬ ಅವಕಾಶ ನೀಡಿದೆ ಎಂದವರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ. ವಕ್ತಾರ ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?