ಮಂಗಳೂರಿನ ನ್ಯೂ ಫೀಲ್ಡ್ ಸ್ಟ್ರೀಟ್ ರಸ್ತೆ ಅಗಲೀಕರಣ : ಮನಪಾದಲ್ಲಿ ಸಮಾಲೋಚನಾ ಸಭೆ

ನಗರದ ನ್ಯೂ ಫೀಲ್ಡ್ ಸ್ಟ್ರೀಟ್ ರಸ್ತೆ ಅಗಲೀಕರಣದ ಬಗ್ಗೆ ಸಮಾಲೋಚನೆ ಸಭೆಯು ಮಹಾನಗರಪಾಲಿಕೆಯ ಮಾನ್ಯ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ ಹಾಗೂ ಶಾಸಕರಾದ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ನ್ಯೂ ಫೀಲ್ಡ್ ಸ್ಟ್ರೀಟ್ ರಸ್ತೆ ಅಗಲೀಕರಣದ ಕುರಿತು ಸಾರ್ವಜನಿಕರ ಬಹುಕಾಲದ ಮನವಿಯನ್ನು ಪರಿಗಣಿಸಿ ರಸ್ತೆ ಅಗಲೀಕರಣ ಕೆಲಸ ಪ್ರಾರಂಭವಾಗಿದೆ. ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ರಸ್ತೆಯನ್ನು ಅಗಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್,ಪಾಲಿಕೆ ಸದಸ್ಯರಾದ ಜಯಶ್ರೀ ಕುಡ್ವ, ರಥಬೀದಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಶ್ರೀಯುತ ಶ್ರೀ ಸಿ.ಎಲ್ ಶೆಣೈ, ಶ್ರೀ ಪ್ರಶಾಂತ ರಾವ್, ಶ್ರೀ ರಾಮಚಂದ್ರ ಕಾಮತ್, ಮಹಾನಗರಪಾಲಿಕೆಯ ಹಿರಿಯ ಅಧಿಕಾರಿಗಳಾದ ಸುರೇಶ್, ಬಾಲಕೃಷ್ಣ ಗೌಡ , ಶಿವಲಿಂಗಪ್ಪ, ದರ್ಶನ್ ಗೌಡ, ದರ್ಶನ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?