ಕಂಕನಾಡಿಯ ಎಲ್.ಜಿ. ಶೋರೂಂನಲ್ಲಿ ಬೆಂಕಿ ಅವಘಡ

ನಗರದ ಕಂಕನಾಡಿಯ ಮುಖ್ಯರಸ್ತೆಯಲ್ಲಿ ಮಾಯಾ ಇಂಟರ್‌ನ್ಯಾಷನಲ್ ಹೊಟೇಲ್ ಕಟ್ಟಡದಲ್ಲಿರುವ ಎಲ್.ಜಿ. ಇಲೆಕ್ಟ್ರಾನಿಕ್ ಸಾಮಗ್ರಿಗಳ ಶೋರೂಮ್‌ನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದ ಎಲ್‌ಜಿ ಶೋರೂಮ್‌ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

olg fire

ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಅಗ್ನಿಶಾಮಕ ಠಾಣೆಗೆ ಬಂದ ಫೋನ್ ಕರೆಯ ಆಧಾರದ ಮೇಲೆ ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಬೆಂಕಿ ನಂದಿಸಲು ಕಾರ್ಯಾಚರಣೆ ಆರಂಭಿಸಿತು. ಆದರೆ ಅಷ್ಟರಲ್ಲಿ ಶೋರೂಮ್‌ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಬಹುತೇಕ ಸುಟ್ಡು ಹೋಗಿವೆ.

Related Posts

Leave a Reply

Your email address will not be published.

How Can We Help You?