ವಿಕೇಂಡ್ ಕರ್ಫ್ಯೂ ಸಮಾಜಕ್ಕೆ ಸಮಸ್ಯೆ : ರಮಾನಾಥ ರೈ

ಲಾಕ್‍ಡೌನ್ ಮತ್ತು ವೀಕೆಂಡ್ ಕಫ್ರ್ಯೂ ಸಮಾಜಕ್ಕೆ ದೊಡ್ಡ ಸಮಸ್ಯೆಯಾಗಿದೆ. ಸೋಂಕಿನ ಬಗ್ಗೆ ಜಾಗೃತಿಯಿಂದ ಜೀವನ ಮಾಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸರ್ಕಾರ ಕಠಿಣ ನಿಯಮಗಳನ್ನು ಹೊರಡಿಸಿದರೆ ನನ್ನ ವಿರೋಧ ಇಲ್ಲ. ಕರಾವಳಿಯಲ್ಲಿ ಧಾರ್ಮಿಕ ಆಚರಣೆಗಳಿಗೆ ಸಮಸ್ಯೆಯಾಗಿದೆ. ಬ್ರಹ್ಮಕಲಶ, ಯಕ್ಷಗಾನ, ಇಂತಹ ಆಚರಣೆಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ಅನುಭವದ ಕೊರತೆಯಿಂದ ಲಾಕ್‍ಡೌನ್ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಒಮಿಕ್ರಾನ್ ಅಲ್ಲ ಮೇಕೆಕ್ರಾನ್. ವೀಕೆಂಡ್ ಕರ್ಫ್ಯೂ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಕೊರೊನಾ ಸಮಸ್ಯೆ ಇಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

Related Posts

Leave a Reply

Your email address will not be published.

How Can We Help You?