ಪ್ರಾಣಿಗಳಲ್ಲಿ ದೇವರನ್ನುಕಾಣಬೇಕು :ಚಂದನ್ ಶರ್ಮ

ಉಜಿರೆ: ಶ್ವಾನವನ್ನೊಳಗೊಂಡಂತೆ ಎಲ್ಲ ಪ್ರಾಣಿಗಳ ಕಣ್ಣಲ್ಲಿದೇವರನ್ನುಕಾಣಬೇಕುಎಂದು ಪವರ್ ಟಿವಿ ವಾಹಿನಿಯ ಮಾಜಿ ಸಂಪಾದಕಚಂದನ್ ಶರ್ಮ ಹೇಳಿದರು.

ಉಜಿರೆಎಸ್.ಡಿ.ಎಂಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ  ನಡೆದ, ಉಪನ್ಯಾಸಕಿ ಶ್ರುತಿಜೈನ್‍ಅವರ ಚೊಚ್ಚಲ ಕೃತಿ ‘ಪ್ರೀತಿಗೊಂದು ಹೆಸರುಇದುಝಿಪ್ಪಿಗ್ರಫಿ’  ಪುಸ್ತಕ ಲೋಕಾರ್ಪಣಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ವಾನಗಳು ಬದುಕಿನ ಪಾಠವನ್ನು ಕಲಿಸುತ್ತದೆ.ಸ್ವಾರ್ಥ ಅಸೂಯೆಗಳಿಲ್ಲದೆ ಪರಿಶುದ್ಧ ಪ್ರೀತಿಯನ್ನು ಶ್ವಾನಗಳು ಮಾತ್ರ ನೀಡುತ್ತವೆ. ಮಾತು ಬರದಿದ್ದರೂ ನಮ್ಮೆಲ್ಲ ಭಾವನೆಗಳಿಗೆ ಸ್ಪಂದಿಸುವ ಗುಣ ಅವುಗಳಲ್ಲಿದೆ ಎಂದು ಹೇಳಿದರು.

       ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಪುಸ್ತಕಗಳನ್ನು ಪ್ರೀತಿಯಿಂದಓದಲು ಆರಂಭಿಸಿದರೆ ಅದು ನಿದ್ದೆತರಿಸುವುದಿಲ್ಲ. ಓದುವ ಹವ್ಯಾಸ ಮತ್ತು ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಗುಣವಿಲ್ಲದಿದ್ದರೆ ಮಾಧ್ಯಮಜಗತ್ತಿನಲ್ಲಿಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. 

ಪತ್ರಿಕೋದ್ಯಮಎನ್ನುವುದು ಮಾನವೀಯತೆಯ ಪ್ರತಿರೂಪವಾಗಿರಬೇಕು.ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಕೆಲಸ ಮಾಡುವವನೇ ನಿಜವಾದ ಪತ್ರಕರ್ತ. ಈ ನಿಟ್ಟಿನಲ್ಲಿಎಲ್ಲರೂಯೋಚಿಸಬೇಕಾದ ಅನಿವಾರ್ಯತೆಇದೆ.

ಸದಾ ಪ್ರಯೋಗಶೀಲರಾಗಿ ಬದಲಾದಕಾಲಘಟ್ಟಕ್ಕೆತಕ್ಕಂತೆ ಹೊಸತನಗಳನ್ನು ಮೈಗೊಡಿಸಿಕೊಳ್ಳಬೇಕು. ವೃತ್ತಿಕ್ಷೇತ್ರದಲ್ಲಿರುವಎಲ್ಲರಂತೆಆಗದೇ ಭಿನ್ನವಾಗಿ ಗುರುತಿಸಿಕೊಂಡು ಬೇಡಿಕೆಗಳನ್ನು ಸೃಷ್ಟಿಸಿಕೊಳ್ಳುವುದೇ ನಿಜವಾದ ಸಾಧನೆಎಂದು ನುಡಿದರು.

       ಪುಸ್ತಕದಕುರಿತು ಮಾತನಾಡಿದ ಲೇಖಕಿ ಶೃತಿಜೈನ್‍ಜಿಪ್ಪಿಯೊಂದಿಗಿನ 6 ವರ್ಷದ  ಬಾಂಧವ್ಯವನ್ನೆಅಕ್ಷರರೂಪಕ್ಕೆ ಇಳಿಸಿದ್ದೇನೆ. ಪುಸ್ತಕದಲ್ಲಿ ಅವಳ ನೋವು ನಲಿವು , ಪ್ರೀತಿ, ತುಂಟಾಟಎಲ್ಲವೂಇದೆ. ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು.ಇದರಿಂದ ನಮ್ಮಯೋಚನೆ ಮತ್ತು ಮಾತುಗಳು ಅರ್ಥಪೂರ್ಣವಾಗಿರುತ್ತದೆಎಂದು ಹೇಳಿದರು 

ಉಜಿರೆಎಸ್.ಡಿ.ಎಂಕಾಲೇಜಿನಅಂತಿಮ ಪದವಿ ವಿದ್ಯಾರ್ಥಿಗಳು ತಯಾರಿಸಿದ ಪ್ರತಿಧ್ವನಿ ಪ್ರಾಯೋಗಿಕ ಪತ್ರಿಕೆಯನ್ನುಅತಿಥಿಗಳು  ಅನಾವರಣಗೊಳಿಸಿದರು. ಉದ್ಘಾಟಕರಾದಚಂದನ್ ಶರ್ಮ ಮತ್ತುದಕ್ಷಿಣಕನ್ನಡ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಪದ್ಮಪ್ರಸಾದ್‍ಜೈನ್‍ಅವರನ್ನು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥಡಾ.ಬಿ.ಎ ಕುಮಾರ್ ಹೆಗ್ಡೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾದ್ಯಾಪಕರು, ಉಜಿರೆ ಸಾನಿಧ್ಯ ಸಂಸ್ಥೆಯ ಮೇಲ್ವಿಚಾರಕರಾದ ಮಲ್ಲಿಕಾ ಮತ್ತು ಹೆಲೆನ್ , ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

     ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ  ವಿಭಾಗ  ಮುಖ್ಯಸ್ಥಡಾ.ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಅಭ್ಯುದಯ್‍ಜೈನ್ ವಂದನಾರ್ಪಣೆ ನೆರವೇರಿಸಿದರು. ವಿದ್ಯಾರ್ಥಿ ಶಂತನುಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published. Required fields are marked *

How Can We Help You?