ಮೂಡುಬಿದರೆಯ ಕೀರ್ತಿನಗರದಲ್ಲಿ ದನದ ರುಂಡ ಪತ್ತೆ

ಮೂಡುಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯ ಮಹಾವೀರ ಕಾಲೇಜು ಬಳಿಯ ಕೀರ್ತಿನಗರದಲ್ಲಿ ದನದ ರುಂಡ ಪತ್ತೆಯಾಗಿದೆ.

ಘಟನೆ ಬೆಳಗಿನ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ವೇಳೆ ಪ್ಲಾಸ್ಟಿಕ್ ಚೀಲವೊಂದರಲ್ಲಿ ರುಂಡವನ್ನು ತುಂಬಿಸಿ ತಂದು ಬಿಸಾಡಿ ಹೋಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ರುಂಡವನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಗೋಮಾತೆಯ ರುಂಡವನ್ನು ರಸ್ತೆಯಲ್ಲಿ ಎಸೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಪೊಲೀಸರು 48 ಗಂಟೆಗಳೊಳಗಾಗಿ ಪತ್ತೆ ಮಾಡಿ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕ ಒತ್ತಾಯಿಸಿದೆ.

Related Posts

Leave a Reply

Your email address will not be published.

How Can We Help You?