ಲೋನ್ ಆ್ಯಪ್ ಬಳಸಬಾರದು : ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮನವಿ

ಎರಡು ದಿನಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಶಾಂತ್ ಕುಮಾರ್ (26) ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಲೋನ್ ಆಪ್‍ನವರ ಕಿರುಕುಳವೇ ಕಾರಣ ಎಂದು ತಿಳಿದುಬಂದಿದೆ. ಆದ್ದರಿಂದ ಸಾರ್ವಜನಿಕರು ಮೊಬೈಲ್ ಮೂಲಕ ಬಳಸುವ ಇಂತಹ ಲೋನ್ ಆ?ಯಪ್ ಗಳನ್ನು ಬಳಸಬಾರದು. ಈ ಬಗ್ಗೆ  ಎಚ್ಚರ ವಹಿಸುವಂತೆ ಮಂಗಳೂರು ನಗರಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.

ಚೀನಾ ಮೂಲದ ಈ ಲೋನ್ ಆಪ್  ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ. ದೇಶದಲ್ಲಿ ಸುಮಾರು 600ಕ್ಕೂ ಅಧಿಕ ಇಂತಹ ಲೋನ್ ಆಪ್‍ಗಳಿದ್ದು, ಇದನ್ನು ಇನ್‍ಸ್ಟಾಲ್ ಮಾಡುವಾಗ ಅನೇಕ ಷರತ್ತುಗಳನ್ನು ವಿಧಿಸುತ್ತಾರೆ. ಅಂದರೆ ಬಳಕೆದಾರರ ಬೆತ್ತಲೆ ಫೆÇೀಟೊ ಪಡೆದುಕೊಳ್ಳುವುದು, ಕಾಂಟಾಕ್ಟ್, ಪೊಟೊ, ವೀಡಿಯೋ, ಕ್ಯಾಮರಾ ಇತ್ಯಾದಿಯನ್ನು ಮುಕ್ತವಾಗಿ ಪಡೆದುಕೊಳ್ಳುವ ಆಪ್ಷನ್ ಕೇಳಲಾಗುತ್ತದೆ. ಎಲ್ಲದಕ್ಕೂ “ಎಸ್ ” ಅಂದರೆ ಮಾತ್ರ ಇನ್‍ಸ್ಟಾಲ್ ಪೂರ್ತಿಗೊಳಿಸಲು ಸಾಧ್ಯವಿದೆ. ಬಳಿಕ 3 ಸಾವಿರ ರೂ.ನಿಂದ 6 ಸಾವಿರ ರೂ.ವೆರೆಗೆ ಸಾಲ ನೀಡುತ್ತಾರೆ. ಆದರೆ ಇದಕ್ಕೆ ಶೇ.30-60ರವರೆಗೆ ಬಡ್ಡಿ ವಿಧಿಸುತ್ತಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ. ಇಂತಹ ಆಪ್‍ಗೆ ಆರ್‍ಬಿಐ ಸಹಿತ ಯಾರಿಂದಲೂ ಮಾನ್ಯತೆ ಇಲ್ಲ. ಹಾಗಾಗಿ ಯಾರೂ ಕೂಡಾ ಇಂತಹ ಆಪ್ ಇನ್‍ಸ್ಟಾಲ್ ಮಾಡಿ ತೊಂದರೆಗೆ ಸಿಲುಕಬಾರದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?