ಪಡುಬಿದ್ರಿ ಪೇಟೆಯಲ್ಲಿ ಯುವಕ, ಯುವತಿಯ ಮಧ್ಯೆ ನಡೆದ ಹೈಡ್ರಾಮ : ಯುವತಿ ವರದಿ ನೆಗೆಟಿವ್

ಕಳೆದ ವಾರ ಪಡುಬಿದ್ರಿ ಪೇಟೆಯಲ್ಲಿ ಇಬ್ಬರು ಯುವಕರು ಹಾಗೂ ಒರ್ವ ಯುವತಿಯ ಮಧ್ಯೆ ನಡೆದ ಹೈಡ್ರಾಮದ ಅಸಲಿಯತ್ತು ಇದೀಗ ಹೊರಬಿದ್ದಿದ್ದು, ಮಣಿಪಾಲ ಲ್ಯಾಬ್ ನಲ್ಲಿ ನಡೆಸಿದ ರಕ್ತ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು ಯುವಕರಿಬ್ಬರ ವರದಿ ಪಾಸಿಟಿವ್ ಆಗಿದ್ದು ಯುವತಿಯ ಪರೀಕ್ಷಾ ವರದಿ ನೆಗೆಟಿವ್ ಆಗಿದೆ.

padubidre drug case
padubidre drug case

ಹೈದರಾಬಾದ್ ಮೂಲದ ಯುವಕರಿಬ್ಬರ ಜೊತೆ ಒಂದೇ ಸ್ಕೂಟರ್ ನಲ್ಲಿ ಸುತ್ತಾಡಲು ಬಂದು ಸ್ಕೂಟರ್ ಪೆಟ್ರೋಲ್ ಖಾಲಿಯಾಗಿ ಹೋಗಿದ್ದರಿಂದ ಪಡುಬಿದ್ರಿಯ ಬೀಡುಬಳಿಯ ಮುಳ್ಳಿನ ಪೊದೆಯೊಂದರಲ್ಲಿ ಒಮ್ಮೆ ಹೊಡೆದಾಡಿಕೊಂಡರೆ ಮತ್ತೊಮ್ಮೆ ಗೆಳೆತನ ಪ್ರದರ್ಶನ ಮಾಡುತ್ತಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪಡುಬಿದ್ರಿ ಪೊಲೀಸರು ಗಾಯಗೊಂಡಿರುವ ಇವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರಾದರೂ ಅದನ್ನು ಅವರು ನಿರಾಕರಣೆ ಮಾಡಿದ್ದರಿಂದ ಅವರನ್ನು ಅಂಬುಲೆನ್ಸ್ ಹತ್ತಿಸಿ ಮಣಿಪಾಲಕ್ಕೆ ಸಾಗಿಸಲಾಗಿತ್ತು. ಆ ಬಳಿಕ ಆ ಮೂವರನ್ನೂ ಠಾಣೆಗೆ ಕರೆಯಿಸಿ ವಿಚಾರಣೆಯ ಬಳಿಕ ಪೊಲೀಸ್ ವಾಹನದಲ್ಲಿ ರಕ್ತ ಪರೀಕ್ಷೆಗಾಗಿ ಮಣಿಪಾಲ ಲ್ಯಾಬ್ ಗೆ ಕರೆದೊಯ್ಯುವ ಸಂದರ್ಭ ಕಿರಿಕ್ ಮಾಡಿದ ಯುವತಿ ಮಹಿಳಾ ಪೊಲೀಸರು ಕೂಡಾ ನನಗೆ ಟಚ್ ಮಾಡಬಾರದು ಎಂಬುದಾಗಿ ನಶೆಯಲ್ಲಿದ್ದಂತೆ ನಟಿಸುತ್ತಿದ್ದು, ಇದೀಗ ವರದಿಯಲ್ಲಿ ಯುವತಿ ರಕ್ತ ಪರೀಕ್ಷಾ ವರದಿ ನೆಗೆಟಿವ್ ಆಗಿದ್ದು, ಆ ಯುವಕರಿಬ್ಬರು ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದ್ದರಿಂದ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂಬುದಾಗಿ ಪಡುಬಿದ್ರಿ ಎಸ್ಸೈ ಅಶೋಕ್ ಕುಮಾರ್ ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?