ವಿವೇಕಾನಂದರ ವೈಚಾರಿಕ ಪ್ರಜಾಸತ್ತಾತ್ಮಕ ವಿಚಾರಗಳ ಪ್ರತಿಪಾದನೆ ನಡೆಯುತ್ತಿಲ್ಲ – ಪ್ರೋ.ಪಟ್ಟಾಭಿರಾಮ ಸೋಮಯಾಜಿ

ವಿವೇಕಾನಂದರ ವೈಚಾರಿಕ ಪ್ರಜಾಸತ್ತಾತ್ಮಕ ವಿಚಾರಗಳ ಪ್ರತಿಪಾದನೆ ನಡೆಯುತ್ತಿಲ್ಲ – ಪ್ರೋ.ಪಟ್ಟಾಭಿರಾಮ ಸೋಮಯಾಜಿ

ವಿವೇಕಾನಂದರನ್ನು ಹಿಂದೂ ಪುನರುತ್ಥಾನದ ಆಧುನಿಕ ಸ್ವಾಮೀಜಿ ಎಂಬ ನೆಲೆಯಲ್ಲಿ ಬಿಂಬಿಸುತ್ತಾರೆಯೇ ವಿನಾಃ ಅವರ ವೈಚಾರಿಕ ಪ್ರಜಾಸತ್ತಾತ್ಮಕ ಜಾತ್ಯಾತೀತ ವಿಚಾರಗಳ ಪ್ರತಿಪಾದನೆ ನಡೆಯುತ್ತಿಲ್ಲ ಎಂದು ನಿವ್ರತ್ತ ಪ್ರಾಧ್ಯಾಪಕರಾದ ಪ್ರೋ.ಪಟ್ಟಾಭಿರಾಮ ಸೋಮಯಾಜಿಯವರು ಅಭಿಪ್ರಾಯ ಪಟ್ಟರು.

ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ವಿವೇಕಾನಂದರ ಚಿಂತನೆಗಳು ಹಾಗೂ ಯುವ ಭಾರತ ಎಂಬ ವಿಷಯದ ಬಗ್ಗೆ ವಿಚಾರವನ್ನು ಮಂಡಿಸುತ್ತಾ ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಸ್ವಾಮಿ ವಿವೇಕಾನಂದರ ಮೇಲೆ ಆಧ್ಯಾತ್ಮಿಕ ಚಿಂತನೆಗಳು ರಾಮಕ್ರಷ್ಣ ಪರಮಹಂಸರಿಂದ ಪ್ರಭಾವಿತವಾಗಿದ್ದರೂ, ಹಲವಾರು ಪಾಶ್ಚಾತ್ಯ ಇಂಗ್ಲೀಷ್ ಚಿಂತಕರೂ ಕೂಡ ಪ್ರಭಾವ ಬೀರಿದ್ದಾರೆ.ಪುರೋಹಿತಶಾಹಿ ವ್ಯವಸ್ಥೆ,ಜಾತಿ ಪದ್ದತಿಯ ಬಗ್ಗೆ ಜೀವನದುದ್ದಕ್ಕೂ ಸಂಘರ್ಷ ನಡೆಸಿದ ವಿವೇಕಾನಂದರು ಮೂಢನಂಬಿಕೆ, ಕೋಮುವಾದದ ವಿರುದ್ಧ ಸಹೋದರತ್ವ ಶಾಂತಿ ಸಾಮರಸ್ಯಗಳನ್ನು ಪ್ರತಿಪಾದಿಸಿದ್ದಾರೆ.ಆದುದರಿಂದ ಪ್ರಗತಿಪರ ಜನಪರ ಹೋರಾಟಗಳಲ್ಲಿ ನಂಬಿಕೆ ಇರುವ ವ್ಯಕ್ತಿಗಳು ಇವರ ಆದರ್ಶಗಳನ್ನು ಅಭ್ಯಾಸಿಸುವ ಮೂಲಕ ಅವರ ಚಿಂತನೆಗಳನ್ನು ಜನತೆಗೆ ತಿಳಿಸುವ ಅಗತ್ಯತೆ ಇದೆ ಎಂದು ಹೇಳಿದರು.

dyfi

ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ, ವಿವೇಕಾನಂದರು ಪ್ರಕ್ರತಿವಾದದ ಬಗ್ಗೆ ಧ್ರಢವಾದ ನಿಲುಮೆಯನ್ನು ಹೊಂದಿದ್ದರು.ಚಾರ್ಲ್ಸ್ ಡಾರ್ವಿನ್ ರನ್ನು ಅಭ್ಯಾಸಿಸಿದ ವಿವೇಕಾನಂದರು ಪ್ರಕ್ರತಿಯು ಹಳೆಯದನ್ನು ನಾಶ ಮಾಡಿ ಹೊಸದಾದನ್ನು ಆಯ್ಕೆ ಮಾಡುತ್ತದೆ.ಪ್ರಕ್ರತಿಯ ಸಹಜ ಆಯ್ಕೆ ಸಿದ್ದಾಂತವನ್ನು ಪ್ರತಿಪಾದಿಸಿದ ಅವರು ಈ ನಿಟ್ಟಿನಲ್ಲಿ ಧ್ವಂದ್ವಮಾನ ಬೌತಿಕವಾದದ ಪರ ಇದ್ದರು ಎಂದು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ DYFI ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ, ವಿವೇಕಾನಂದರನ್ನು ಸಂಘಪರಿವಾರವು ಇಂದು ಸಂಪೂರ್ಣವಾಗಿ ಹೈಜಾಕ್ ಮಾಡಿದೆ.ವಿವೇಕಾನಂದರ ವಿಚಾರಧಾರೆಗಳು ಸಂಘಪರಿವಾರದ ವಿಚಾರಧಾರೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಜಾತಿ ಪದ್ದತಿ, ಪುರೋಹಿತ ಶಾಹಿ,ಮತೀಯ ಸಂಘರ್ಷಗಳ ವಿರುದ್ಧ ಹಾಗೂ ಶೂದ್ರರ ರಾಜ್ಯಾಧಿಕಾರದ ಅನಿವಾರ್ಯತೆಗಳನ್ನು ಪ್ರತಿಪಾದಿಸಿದ್ದರು.ಅವರ ಆರ್ಥಿಕ ವಿಚಾರಗಳು ಬಲಪಂಥೀಯತೆಯ ಬದಲು ಮಧ್ಯಮವರ್ಗೀಯ ಉದಾರವಾದಿ ಆರ್ಥಿಕ ಸಿದ್ದಾಂತದ ಪರ ಇತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ಯುವಜನ ಮಹಿಳಾ ದಲಿತ ಕಾರ್ಮಿಕ ರೈತ ಸಂಘಟನೆಗಳ ಮುಖಂಡರು ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು,ಸಾಮಾಜಿಕ ಹೋರಾಟಗಾರರು,ಬುದ್ದಿಜೀವಿಗಳು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ,ಕೊನೆಯಲ್ಲಿ ಯುವಜನ ನಾಯಕರಾದ ಮನೋಜ್ ವಾಮಂಜೂರು ರವರು ವಂದಿಸಿದರು.

Related Posts

Leave a Reply

Your email address will not be published.

How Can We Help You?