ಸಿನಿಮೀಯಾ ಶೈಲಿಯಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸ್ ವರುಣ್ ತಂಡಕ್ಕೆ ನಗದು ಘೋಷಣೆ

ಸಿನಿಮೀಯಾ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್ ವರುಣ್ ಮತ್ತು ತಂಡದ ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗಾಗಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು 10 ಸಾವಿರ ಘೋಷಣೆ ಮಾಡಿದ್ದಾರೆ. ನಗರ ಹೃದಯಭಾಗದ ಸ್ಟೇಟ್‍ಬ್ಯಾಂಕ್ ಬಳಿ ನಡೆದಿದೆ. ಸದ್ಯ ವೀಡಿಯೋ ವೈರಲ್ ಆಗಿದ್ದು, ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೆÇಲೀಸ್ ಆಯುಕ್ತರ ಕಚೇರಿಯ ಮುಂಭಾಗದ ನೆಹರು ಮೈದಾನದಲ್ಲಿ ಉತ್ತರಪ್ರದೇಶ ಮೂಲದ ಗ್ರಾನೈಟ್ ಕೆಲಸ ಮಾಡುವ ವ್ಯಕ್ತಿಯೋರ್ವನ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದನು. ತಕ್ಷಣವೇ ಆತ, ಹಾಗೂ ಸ್ಥಳೀಯರು ಎಚ್ಚೆತ್ತು ಬೊಬ್ಬೆ ಹಾಕಿ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಕಮೀಷನರೇಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‍ಐ ವರುಣ್ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನ ಪತ್ತೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡಕ್ಕೆ 10 ಸಾವಿರ ಘೋಷಣೆ ಮಾಡಿದ್ದಾರೆ.

Related Posts

Leave a Reply

Your email address will not be published.

How Can We Help You?