ಮದುವೆ ಗಾಡಿಯಂತೆ ಸಿಂಗರಿಸಿದ ಕಾರಿನ ಹಿಂದೆ ಅಕ್ರಮ ದನಸಾಗಾಟ

ಪಡುಬಿದ್ರಿಯಲ್ಲಿ ಎಗ್ಗಿಲ್ಲದೆ ದನ ಕಳ್ಳರ ಹಾವಳಿ ಮುಂದುವರೆದಿದ್ದು ಇಂದು ಶಿರ್ವದಲ್ಲಿ ಕಳ್ಳರ ವಿನೂತನ ರೀತಿಯ ಕೈಚಳಕ ಬಯಲಾಗಿದೆ. ಮದುವೆ ರೀತಿ  ಸಿಂಗರಿಸಿದ ಇನ್ನೋವಾ ಕಾರಿನ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿದ್ದುದು ಬಯಲಾಗಿದೆ.

ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾದ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 16 ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.ಈ ರೀತಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಾಚರಣೆ ಮಾಡಿದ್ದಾರೆ.

padubidre

ಪೆÇಲೀಸರು ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸುವ ಸಲುವಾಗಿ ಗೋಕಳ್ಳರು ಈ ರೀತಿ ಹೊಸ ತಂತ್ರ ಮಾಡಿದ್ದಾರೆ. ಶಿರ್ವ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದ್ದು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?