ತೆಂಕನಿಡಿಯೂರು : ವಿವೇಕಾನಂದ ಜಯಂತಿ ಆಚರಣೆ

ಉಡುಪಿ : ‘ಮನುಷ್ಯನಿಗೆ ತನ್ನ ಶಕ್ತಿಯ ಅರಿವಾದಾಗ ಅದ್ಬುತವನ್ನು ಸೃಷ್ಟಿಸಬಹುದು ಯುವಕರಿಗೆ ಅವರ ಶಕ್ತಿಯ ಅರಿವು ಮೂಡಿಸಲು ವಿವೇಕಾನಂದರ ಚಿಂತನೆಗಳು ಸಹಕಾರಿ.  ಅದರಲ್ಲೂ ಇಂದು ಇದು ಹೆಚ್ಚು ಪ್ರಸ್ತುತ’ ಎಂದು ರೆಡ್‍ಕ್ರಾಸ್ ಉಡುಪಿ ಜಿಲ್ಲಾ ಸಭಾಪತಿ ಶ್ರೀ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.  ಅವರು ಭಾರತೀಯ ರೆಡ್‍ಕ್ರಾಸ್ ಉಡುಪಿ ಘಟಕ, ಎನ್.ಎಸ್.ಎಸ್. ಮತ್ತು ರೆಡ್‍ಕ್ರಾಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕಾನಂದ ಜಯಂತಿ ಮತ್ತು ಪ್ರಥಮ ಚಿಕಿತ್ಸೆ ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

THENKA NIDIYUR

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಮಾತನಾಡಿ ವಿವೇಕಾನಂದರ ಚಿಂತನೆಗಳು ಭಾರತೀಯ ಸಂಸ್ಕøತಿಯ ಅಭಿವ್ಯಕ್ತಿ ಭಾರತೀಯ ಜೀವನ ಕ್ರಮಕ್ಕೆ ಅವರ ಬೋಧನೆಗಳು ಆದರ್ಶ ಎಂದರು.  ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಡಾ. ಸುರೇಶ್ ಶೆಣೈ ಅವರು ವ್ಯಕ್ತಿತ್ವ ಬೆಳವಣಿಗೆಯಲ್ಲಿ ಆರೋಗ್ಯದ ಮಹತ್ವವನ್ನು ವಿವರಿಸಿ ದೈಹಿಕ ಆರೋಗ್ಯವು ವಿವೇಕಾನಂದರ ಚಿಂತನೆಯು ಪ್ರತಿಪಾದಿಸುತ್ತದೆ ಎಂದರು.  ರೆಡ್‍ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿ ಡಾ. ಕೀರ್ತಿ ಪಾಲನ್ ಅವರು ಪ್ರಥಮ ಚಿಕಿತ್ಸೆಯ ವಿವಿಧ ರೀತಿಗಳ ಬಗ್ಗೆ ತರಬೇತಿ ನೀಡಿದರು.  ರೆಡ್‍ಕ್ರಾಸ್ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿ ನಿರೂಪಿಸಿದರು.  ರೆಡ್‍ಕ್ರಾಸ್ ಉಡುಪಿ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ವಂದಿಸಿದರು.  ಇದೆ ಸಂದರ್ಭದಲ್ಲಿ ರಂಗಭೂಮಿ ಕಲಾವಿದೆ ಕುಮಾರಿ ಭಾವನಾ ಹಾಗೂ ಕ್ರೀಡಾಪಟು ಅಭಿಮಾನ್ ಕುಮಾರ್ ಅವರನ್ನು ರೆಡ್‍ಕ್ರಾಸ್ ವತಿಯಿಂದ ಸನ್ಮಾನಿಸಲಾಯಿತು.

Related Posts

Leave a Reply

Your email address will not be published.

How Can We Help You?