ಪುತ್ತೂರಿನ ಬಸ್ ನಿಲ್ದಾಣದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ನಿಯಂತ್ರಣಾಧಿಕಾರಿಗೆ ಹಲ್ಲೆ

ಪುತ್ತೂರು: ಪುತ್ತೂರು ಕೆ ಎಸ್ ಆರ್ ಟಿ ಸಿಬಸ್ ಸಂಚಾರ ನಿಯಂತ್ರಣಾಧಿಕಾರಿಯೊಬ್ಬರಿಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಲದಲ್ಲಿ ನಡೆದಿದೆ.
ಕೆ ಎಸ್ ಆರ್ ಟಿ ಸಿಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಭಟ್ ಹಲ್ಲೆಗೊಳಗಾದವರು. ಅವರು ಕರ್ತವ್ಯದಲ್ಲಿರುವ ವೇಳೆ ಪ್ರಯಾಣಿಕರೊರ್ವ ಕಾಂಞಂಗಾಡಿಗೆ ಹೋಗುವ ಕೇರಳದ ಬಸ್ ಮಾಹಿತಿ ಕೇಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ‘ನಾನು ಕರ್ತವ್ಯದಲ್ಲಿರುವ ವೇಳೆ ಕಾಂಞಂಗಾಡಿಗೆ ಹೋಗುವ ಕೇರಳದ ಬಸ್ ಮಾಹಿತಿ ಕೇಳಿದ ಪ್ರಯಾಣಿಕರೊಬ್ಬರಿಗೆ ಮಾಹಿತಿ ನೀಡಿದ್ದೆ. ಅದರೆ ಸ್ವಲ್ಪ ಹೊತ್ತಿನ ಬಂದ ಪ್ರಯಾಣಿಕ ನನಗೆ ಹಲ್ಲೆ ನಡೆಸಿ ಬೆದರಿಯೊಡ್ಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುಬ್ರಹ್ಮಣ್ಯ ಭಟ್ ಅವರು ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೆÇಲೀಸರು ವಶಕ್ಕೆ ಪಡೆದು ಕೊಂಡಿದ್ದು. ಆತ ಸುರತ್ಕಲ್ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಆತ ತನ್ನ ಹೆಂಡತಿ ಮನೆ ಕಾಂಞಂಗಾಡಿಗೆ ಹೊರಟ್ಟಿದ್ದ ಎಂದು ಘಟನೆ ಸಂದರ್ಭ ಸಾರ್ವಜನಿಕರು ವಿಚಾರಿಸಿದಾಗ ಮಾಹಿತಿ ತಿಳಿದು ಬಂದಿದೆ.