ಕಣ್ಮರೆಯಾದ ಧೀಮಂತ ಪತ್ರಕರ್ತ; ನಿರ್ಭೀತತೆಗೆ ಹೆಸರಾದ ಕಮಲ್ ಖಾನ್

ಉತ್ತರ ಪ್ರದೇಶದ ರಾಜಕೀಯ ವರದಿಗಾರಿಕೆಗೆ ಹೆಸರಾಗಿದ್ದ ಎನ್‌ಡಿಟಿವಿಯ ಹಿರಿಯ ಪತ್ರಕರ್ತ ಕಮಲ್ ಖಾನ್ ಅವರು ಎಲ್ಲರನ್ನಗಲಿದ್ದಾರೆ. ಕಮಲ್ ಖಾನ್ ಮೂರು ದಶಕಗಳಿಗೂ ಹೆಚ್ಚು ಕಾಲ NDTV ಯಲ್ಲಿ ದುಡಿದ್ದಾರೆ. ಅವರ ಕೆಲಸದಲ್ಲಿ ಗ್ರಹಿಕೆ ಮತ್ತು ಸಮಗ್ರತೆ ಎದ್ದು ಕಾಣುತ್ತಿತ್ತು. ಅವರು ಕಠಿಣ ಸತ್ಯಗಳನ್ನು ಬಿಚ್ಚಿಡುತ್ತಿದ್ದ ನಿರ್ಭೀತ ಪತ್ರಕರ್ತರೂ ಆಗಿದ್ದರು.

ಅವರ ಸಾವು ಅವರ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ, ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಲಕ್ಷಾಂತರ ಜನರು ನೆನಪಿಸಿಕೊಳ್ಳುತ್ತಿದ್ದಾರೆ.

ಕಮಲ್ ಖಾನ್ ಅವರು ಕೇವಲ ಪತ್ರಿಕೋದ್ಯಮ, ಅದರ ಭಾಷೆ ಅಥವಾ ಅದರ ತತ್ವಗಳಿಗಾಗಿ ಮಾತ್ರ ದುಡಿಯಲಿಲ್ಲ. ಅವರು ಊರು, ದೇಶಕ್ಕಾಗಿ ದುಡಿದರು. ಉತ್ತರ ಪ್ರದೇಶದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷದ ಜ್ವಾಲೆ ಪಸರಿಸುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ದ ಧ್ವನಿ ಎತ್ತಿದರು. ಸೌಹಾರ್ದತೆಯಿಂದ ಕೂಡಿದ್ದ ಹಳೆಯ ಲಕ್ನೋ ಮತ್ತೆ ಮರುಕಳಿಸಬೇಕು ಎಂದು ಹೇಳುತ್ತಿದ್ದರು. ಅದಕ್ಕಾಗಿ ಅವರು ಹೋರಾಡುತ್ತಿದ್ದರು. ಈಗ ಅವರಿಲ್ಲದ ಲಕ್ನೋ ಅಪೂರ್ಣವಾಗಿದೆ ಎನ್ನುತ್ತಾರೆ ಎನ್ಡಿ ಟಿವಿ ಸಂಪಾದಕ ರವೀಶ್ ಕುಮಾರ್.

ಎರಡು ನಿಮಿಷದ ವರದಿಗಾಗಿಯೂ ಅವರು ದಿನವಿಡೀ ಯೋಚಿಸುತ್ತಿದ್ದರು, ದಿನವಿಡೀ ಓದುತ್ತಿದ್ದರು ಮತ್ತು ಇಡೀ ದಿನ ಬರೆಯುತ್ತಿದ್ದರು. ಕಮಲ್ ಅವರು ಹೇಗೆ ಕೆಲಸ ಮಾಡುತ್ತಿದ್ದರು ಎಂಬುದು ಅವರ ಜೊತೆ ಕೆಲಸ ಮಾಡಿದವರಿಗೆ ಗೊತ್ತು. ಅಯೋಧ್ಯೆಯ ಕುರಿತು ಅವರ ನೂರಾರು ವರದಿಗಳನ್ನು ಮಾಡಿದ್ದರು. ಅವರು ವರದಿಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದವು. ಧರ್ಮ ರಾಜಕೀಯಕ್ಕೆ ಬಲಿಯಾಗಿರುವ ಅಯೋಧ್ಯೆಯ ವಿಚಾರದಲ್ಲಿ ಕಮಲ್ ಅವರು ಮತ್ತೊಂದು ಅಯೋಧ್ಯೆಯ ಪರಿಕಲ್ಪನೆಯನ್ನು ಹೊಂದಿದ್ದರು.

ದ್ವೇಷದ ಬೆಂಕಿಯಲ್ಲಿ ನಲುಗಿದ ಅಯೋಧ್ಯೆಯ ಬಗ್ಗೆ ಅವರು ಅನಾಯಾಸವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲಿ ಈ ದ್ವೇಷದ ಜ್ವಾಲೆಗಳನ್ನು ತಣ್ಣಗಾಗಿಸಿವುದರ ಬಗೆಗಿನ ಚಿಂತನೆಗಳಿರುತ್ತಿದ್ದವು. ಅವರು ತುಳಸಿದಾಸರ ರಾಮಾಯಣ ಮತ್ತು ಗೀತೆಗಳನ್ನು ಸ್ಮರಿಸುತ್ತಿದ್ದರು. ಉತ್ತರ ಪ್ರದೇಶದ ಸಮಾಜ ಧರ್ಮ ರಾಜಕೀಯದಲ್ಲಿ ಮುಳುಗಿರುವುದು ಅವರಿಗೆ ತಿಳಿದಿತ್ತು. ಆ ರಾಜಕೀಯವೇ ಅಲ್ಲಿನ ಜನರ ಭಕ್ತಿಯನ್ನು ಕ್ರೋಧವಾಗಿ ಪರಿವರ್ತಿಸಿತು. ಕಮಲ್ ಆ ಸಮಾಜದೊಂದಿಗೆ ಮಾತನಾಡಲು ಅಸಂಖ್ಯಾತ ಧಾರ್ಮಿಕ ಪುಸ್ತಕಗಳನ್ನು ಅಧ್ಯಯನ ಮಾಡಿರಬಹುದು. ಎಂತಹ ವಿರೋಧಿಯೂ ತನ್ನ ಮಾತನ್ನು ನಿಲ್ಲಿಸಿ ಅವರ ಮಾತನ್ನು ಕೇಳಿಸಿಕೊಳ್ಳುವಂತೆ ಅವರು ಮಾತನಾಡುತ್ತಿದ್ದರು ಎಂದು ರವೀಶ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಕಮಲ್ ಖಾನ ಅವರು ನಮ್ಮ ಕಣ್ಣುಗಳ ಮೂಲಕ ನಮ್ಮ ಆತ್ಮವನ್ನು ಸೇರಿಬಿಡುತ್ತಿದ್ದರು. ಅವರ ಸೂಕ್ಷ್ಮವಾದ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನು ಕಲಕುತ್ತಿದ್ದವು. ಅವರು ಎಲ್ಲದಕ್ಕಿಂತ ಮುಖ್ಯವಾದುದು ಪ್ರೀತಿ ಮತ್ತು ಸಹೋದರತ್ವ ಎಂದು ಪದೇ-ಪದೇ ನೆನಪಿಸುತ್ತಿದ್ದವು. ಉತ್ತರ ಪ್ರದೇಶದಿಂದ ಬಂದ ಧರ್ಮ ಮತ್ತು ಹಿರಿಯರು ಇದನ್ನೇ ಬೋಧಿಸಿದ್ದಾರೆ. ರಾಮ ಮತ್ತು ಕೃಷ್ಣನಿಗೆ ಸಂಬಂಧಿಸಿದ ವಿವಾದಗಳ ಕುರಿತು ಕಮಲ್ ಖಾನ್ ಅವರು ಮಾಡುತ್ತಿದ್ದ ವರದಿಗಳಿಗೆ ಬೇರಾವ ಸುದ್ದಿಗಳೂ ಸಾಟಿಯಿಲ್ಲ. ಸದಾ ಓದುವುದರಲ್ಲಿ ತಲ್ಲೀನರಾಗಿರುತ್ತಿದ್ದ ಅವರಿಗೆ ಆ ವಿಚಾರಗಳ ಬಗ್ಗೆ ಸಾಕಷ್ಟು ಜ್ಞಾನವಿತ್ತು.

ಕಮಲ್ ಖಾನ್ ಅವರು ಶಿಸ್ತಿನ ಜೊತೆಗೆ ಗಟ್ಟಿಮಸ್ಸಿನವರೂ ಆಗಿದ್ದರು. ಅವರು, ವರದಿಗಳನ್ನು ಮಾಡುವಾಗ, ಕಾಂಟ್ರಾವರ್ಸಿಗಳನ್ನು ಸೃಷ್ಟಿಸುವ ಅಥವಾ ಜನರಲ್ಲಿ ಅಸಹನೆಯನ್ನು ಹುಟ್ಟಿಸುವ ಸುದ್ದಿಗಳನ್ನು ದೂರ ಇಡುತ್ತಿದ್ದರು. ಅಂತಹ ಸುದ್ದಿಗಳನ್ನು ಮಾಡಲು ಹೇಳಿದರೆ, ನೇರವಾಗಿ ‘ಇಲ್ಲ’ ಎಂದು ಹೇಳುತ್ತಿದ್ದರು. ಅದಕ್ಕೆ ಕಾರಣವನ್ನೂ ವಿವರಿಸುತ್ತಿದ್ದರು. ಹೀಗೆ ವಿವರಿಸುವಾಗ ತನ್ನ ಸುತ್ತ ಇರುತ್ತಿದ್ದ ಜನರಿಗೆ ನಾವು ಮರೆಯಬಾರದ ತತ್ವ ಯಾವುದು ಎಂದು ನೆನಪಿಸುತ್ತಿದ್ದರು – ಅದು ಅನುಭವಿ ಸಂಪಾದಕರೇ ಆಗಿರಲಿ ಅಥವಾ ಹೊಸ ವರದಿಗಾರರು ಇರಲಿ. ‘ಉತ್ತಮ ವರದಿಗಾರನು ಒಳ್ಳೆಯ ಕಾರಣದಿಂದ ಇಲ್ಲ ಎಂದು ಹೇಳುತ್ತಾನೆ, ಆತ ತನ್ನ ಸಂಸ್ಥೆಯನ್ನು ನಿಖರವಾದ ವರದಿಯಿಂದ ರಕ್ಷಿಸುತ್ತಾನೆ’ ಎಂದು ಅವರು ಹೇಳುತ್ತಿದ್ದರು.

ಈ ದೇಶದಲ್ಲಿ ಕಮಲ್ ಖಾನ್ರಂತಹ ಮತ್ತೊಬ್ಬ ಪತ್ರಕರ್ತ ಇರಲಾರ. ಏಕೆಂದರೆ ಕಮಲ್ ಖಾನ್ ಆಗುವ ಪ್ರೌವೃತ್ತಿಯನ್ನು ಬೆಳೆಸಿಕೊಳ್ಳುವ ನೈತಿಕ ಶಕ್ತಿಯನ್ನು ಈ ದೇಶ ಕಳೆದುಕೊಂಡಿದೆ. ಕಮಾಲ್ ಖಾನ್ ಅವರನ್ನು ಮೆಚ್ಚುವ ಲೆಕ್ಕವಿಲ್ಲದಷ್ಟು ಪತ್ರಿಕೋದ್ಯಮ ಸಂಸ್ಥೆಗಳಿದ್ದರೂ, ಅವರಂತೆ ಇರಬಯಸುವ ವರದಿಗಾರರಿದ್ದರೂ, ಆ ರೀತಿಯಲ್ಲಿ ಮತ್ತೊಬ್ಬರನ್ನು ನೋಡುವಷ್ಟು ಇನ್ನು ಬೆನ್ನೆಲುಬು ಯಾವ ಸಂಸ್ಥೆಗಳಿಗೂ ಇಲ್ಲ. ಕಮಲ್ ಖಾನ್ ಎನ್‌ಡಿಟಿವಿಯ ಸ್ಟಾರ್ ಆಗಿದ್ದರು. ಅವರ ಮಾತುಗಳು ಪ್ರಶಾಂತತೆಯ ಬೆಳಕಿನಿಂದ ಮಿನುಗುತ್ತಲೇ ಇರುತ್ತವೆ ಎಂದು ರವೀಶ್ ಬರೆದಿದ್ದಾರೆ.

Related Posts

Leave a Reply

Your email address will not be published.

How Can We Help You?