ಗೋವಿನ ರುಂಡ ಪತ್ತೆ ಪ್ರಕರಣ : ಮೂಡುಬಿದರೆಯಲ್ಲಿ ಹಿಂಜಾವೇಯಿಂದ ಮುತ್ತಿಗೆ

ಮೂಡುಬಿದಿರೆ- ಗೋವಿನ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಿಂದು ಜಾಗರಣ ವೇದಿಕೆಯಿಂದ ಮುತ್ತಿಗೆ ಹಾಕಿದ್ದರು.ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

moodabidre


ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಠಾಣೆಯ ಮುಂಭಾಗ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಆರೋಪಿಗಳನ್ನು ಪತ್ತೆ ಹಚ್ಚುವುದು ನಮ್ಮ ಕರ್ತವ್ಯ.ಸಣ್ಣ ಪುಟ್ಟ ಕುರುಹು ಸಿಕ್ಕಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಸರಿಯಾದ ಕುರುಹುಗಳು ಸಿಕ್ಕಿದ ತಕ್ಷಣ ಪತ್ತೆ ಹಚ್ಚುತ್ತೇವೆ.ನಮಗೆ ಒಂದು ವಾರದೊಳಗಡೆ ಬಂಧಿಸುವುದಾಗಿ ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುದೀಪ್ ವಿಶ್ವಾಸ ವ್ಯಕ್ತ ಪಡಿಸಿದರು.ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಮತ್ತಿತರ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Related Posts

Leave a Reply

Your email address will not be published. Required fields are marked *

How Can We Help You?