ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನೂತನ ಗುಡಿಯಲ್ಲಿ ಶ್ರೀ ಶಿವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ

ವಿಶ್ವಬ್ರಾಹ್ಮಣ ಸಮಾಜದ ಪ್ರಧಾನ ಆರಾಧ್ಯ ಕೇಂದ್ರ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನೂತನ ಶಿಲಾಮಯ ಸುತ್ತು ಪೌಳಿಯ ಆವರಣದ ಒಳಗಿನ ಗುಡಿಯಲ್ಲಿ ಶ್ರೀ ಶಿವ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕವು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರಗಿತು. ಮಹಾಮಹೋಪಾಧ್ಯಾಯ ವಿದ್ವಾನ್ ಪಂಜ ಭಾಸ್ಕರ ಭಟ್ ಉಪಸ್ಥಿತರಿದ್ದು, ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ, ಸಾಲಿಗ್ರಾಮ ಇವರ ಆಚಾರ್ಯತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಧನಂಜಯ ಪುರೋಹಿತ್ ಮತ್ತು ವಿಘ್ನೇಶ್ ಪುರೋಹಿತ್ ಸಹಿತ ಇನ್ನಿತರ ವೈದಿಕರ ಸಹಕಾರದೊಂದಿಗೆ ಜ. 17 ರಂದು ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ.ಕೇಶವ ಆಚಾರ್ಯ, 2ನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಟಿ.ಶಕ್ತಿನಗರ, ಕ್ಷೇತ್ರದ ಆಡಳಿತ ಮಂಡಳಿ ,ಜೀರ್ಣೋದ್ದಾರ ಸಮಿತಿ,ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಕ್ಷೇತ್ರಕ್ಕೆ ಸಂಬಂಧಿಸಿದ 8 ಪೇಟೆ ಅಲ್ಲದೆ ಹತ್ತು ಸಮಸ್ತರ ಸಹಿತ ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಸರಕಾರದ ಕೋವಿಡ್ ನಿಯಮನುಸಾರ ಕಾರ್ಯಕ್ರಮ ನಡೆಯಿತು