ದೇವಸ್ಥಾನವೆಂದರೆ ಸಂಸ್ಕೃತಿಯ ಶ್ರದ್ದೆಯ ಕೇಂದ್ರ -ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ.

 ಮಂಗಳೂರು :  ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನೂತನ ಶಿಲಾಮಯ ಸುತ್ತು ಪೌಳಿಯಲ್ಲಿ ಶ್ರೀ ಶಿವ ಶ್ರೀ ಸುಬ್ರಮಣ್ಯ ದೇವರ ಪ್ರತಿಷ್ಠೆ,  ಬ್ರಹ್ಮ ಕಲಶೋತ್ಸವ ಸಮಾರಂಭದ ಸಲುವಾಗಿ ಧಾರ್ಮಿಕ  ಸಭೆ ಯಲ್ಲಿ ಆಶೀರ್ವಚನ ನೀಡುತ್ತಾ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ಸಂಪುಟ ನರಸಿಂಹ ಸುಬ್ರಮಣ್ಯ ಮಠದಿಶರು ಹೇಳಿದರು. ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ಅನುಗ್ರಹ ಭಾಷಣಗೈದರು. ಆನೆಗುಂದಿ ಮಠದ ಶಿಷ್ಯ ಪವನ ಶರ್ಮ ರವರು ಮಾನವನ ಜೀವನ ಮಾರ್ಗ ಎಂಬ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಸತ್ಯಶಂಕರ ಬೊಳ್ಳಾವ ಧರ್ಮಾಧಿಕಾರಿ ಶಂಕರಾಚಾರ್ಯ ಶಾಖಾ ಮಠ ಕೋಟೆಕಾರ್ ಹಾಗೂ ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಮಧೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎ. ಪರಮೇಶ್ವರ ಆಚಾರ್ಯ ನೀರ್ಚಾಲು, ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ ಶಿವರಾಮ ಆಚಾರ್ಯ, ಮುನಿಯಾಲ್ ದಾಮೋದರ ಆಚಾರ್ಯ, ಪಯ್ಯಲ್  ಭಾಸ್ಕರ ಆಚಾರ್ಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಮೊಕ್ತೇಸರ್ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು. ಬಿ ಜಿ ರಮೇಶ್ ಮತ್ತು ಅಕ್ಷತಾ ಬೈಕಾಡಿ ನಿರೂಪಿಸಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಬಿ ಉದಯ ಆಚಾರ್ಯ ವಂದಿಸಿದರು

Related Posts

Leave a Reply

Your email address will not be published.

How Can We Help You?