ಪಾದಚಾರಿಗೆ ಟ್ಯಾಂಕರ್ ಡಿಕ್ಕಿ ಸ್ಥಳದಲ್ಲೇ ಮೃತ್ಯು

ತಡರಾತ್ರಿ ಪಡುಬಿದ್ರಿಯ ಸೋನು ಡಾಬದಲ್ಲಿ ಉಪಹಾರ ಸೇವಿಸಿ ತೆರಳುತ್ತಿದ್ದ ಟ್ಯಾಂಕರ್ ನಡಿಗೆ ಸಿಲುಕಿದ ಅಪರಿಚಿತ ಪಾದಚಾರಿ ಯುವಕನೋರ್ವ ಸ್ಥಳದಲ್ಲೇ ದಾರುಣಾವಾಗಿ ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಉತ್ತರ ಕರ್ನಾಟಕದವನೋ ಎಂಬಂತ್ತಿರುವ ಸುಮಾರು 28 ವಯಸ್ಸಿನ ಯುವಕನ ತಲೆಭಾಗ ಟ್ಯಾಂಕರ್ ನ ಚಕ್ರಕ್ಕೆ ಸಿಲುಕಿ ಯುವಕ ಕೆಲವೇ ಕ್ಷಣದಲ್ಲಿ ಸಾವನ್ನಪ್ಪಿದ್ದು, ಇದಕ್ಕೆ ಕಾರಣವಾದ ಟ್ಯಾಂಕರ್ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಲು ಯತ್ನಿಸಿತ್ತಾದರೂ ಘಟನಾ ಸ್ಥಳದಲ್ಲಿದ್ದ ಯುವಕರು ಅದನ್ನು ಬೆನ್ನಿಟ್ಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಶವದ ಗುರುತು ಪತ್ತೆಗಾಗಿ ಶವವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.

How Can We Help You?