ಪಂಜಾಬ್ ವಿಧಾನಸಭಾ ಚುನಾವಣೆ : ಎಎಪಿ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಘೋಷಣೆ

ಪಂಜಾಬ್ ವಿಧಾನಸಭಾ ಚುನಾವಣೆ: ಎಎಪಿ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಘೋಷಣೆ

ಪಂಜಾಬ್ ವಿಧಾನಸಭಾ ಚುನಾವಣೆಗೆ ಭಗವಂತ್ ಮಾನ್ ಅವರನ್ನು ಆಮ್‌ ಆದ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ.

ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದ, 48 ವರ್ಷ ವಯಸ್ಸಿನ ಭಗವಾನ್‌ ಮಾನ್‌ ಅವರ ಹೆಸರನ್ನು ಸಾರ್ವಜನಿಕ ಸಮಾರಂಭದಲ್ಲಿ ಘೋಷಿಸಲಾಗಿದೆ.

ಕೇಜ್ರಿವಾಲ್ ಅವರು ಎಎಪಿಯ ‘ಜನತಾ ಚುನೇಗಿ ಅಪ್ನಾ ಸಿಎಂ’ ಅಭಿಯಾನ ಕಾರ್ಯಕ್ರಮದಲ್ಲಿ ಸಿಎಂ ಅಭ್ಯರ್ಥಿ ಯಾರು ಆಗಬೇಕು ಎಂದು ಪಂಜಾಬ್‌ ಜನರನ್ನು ಪ್ರಶ್ನಿಸಿದರು. ಎಲ್ಲರೂ ಮಾನ್‌ ಅವರನ್ನು ಘೋಷಸಬೇಕು ಎಂದು ಹೇಳಿದರು ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಜನವರಿ 13 ರಂದು ಕೇಜ್ರಿವಾಲ್ ಪಂಜಾಬ್‌ನ ಜನರಿಗೆ ತಮ್ಮ ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಕೇಳಿದ್ದರು. ಇದಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಪ್ರಕಟಿಸಿದ್ದರು.

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಪಂಜಾಬ್‌ ಚುನಾವಣೆಯನ್ನು ಫೆಬ್ರವರಿ 14ರ ಬದಲಿಗೆ ಫೆಬ್ರವರಿ 20ರಂದು ನಡೆಸುವುದಾಗಿ ಸೋಮವಾರ ಮರು ನಿಗದಿ ಮಾಡಿದೆ.

ಹೊಸ ವೇಳಾಪಟ್ಟಿಯಂತೆ ಫೆಬ್ರವರಿ 1 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಫೆಬ್ರವರಿ 2 ನಾಮಪತ್ರಗಳ ಪರಿಶೀಲನೆಯ ದಿನಾಂಕ, ಫೆಬ್ರವರಿ 2 ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ.ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿ ಅಧಿಕಾರಕ್ಕೇರಿತು.ಈ ಮೂಲಕ, 10 ವರ್ಷಗಳ ನಂತರ SAD-BJP ಸರ್ಕಾರವನ್ನು ಹೊರ ದೂಡಿತು.

Related Posts

Leave a Reply

Your email address will not be published.

How Can We Help You?