ಉಜಿರೆಯಎಸ್.ಡಿ.ಎಂ. ಕಾಲೇಜಿನಲ್ಲಿ”ಹಿಂದಿ ದಿವಸ್” ಆಚರಣೆ

ಉಜಿರೆ ಜ.18.:- ವಿಶ್ವದ ಪ್ರಮುಖ ಭಾಷೆಗಳಲ್ಲಿ ಹಿಂದಿ ಮೊದಲ ಸಾಲಿನಲ್ಲಿಇದೆ, ಭಾರತದಲ್ಲಿಕೂಡ ಹಿಂದಿ ಭಾಷೆಯನ್ನು ಮಾತನಾಡುವವರುದೊಡ್ಡ ಸಂಖ್ಯೆಯಲ್ಲಿಇದ್ದಾರೆ, ಆಗಾಗಿ ನಾವು ಹಿಂದಿ ದಿವಸವನ್ನು ಸಂಭ್ರಮದಿಂದಆಚರಣೆ ಮಾಡಬೇಕುಎಂದುಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದರಸಾಯನಶಾಸ್ತ್ರ ಪ್ರಾಧ್ಯಾಪಕಿಡಾ.ನಪೀಸತ್ ಹೇಳಿದರು.ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ “ಹಿಂದಿ ದಿವಸ್” ಮತ್ತು ವಿಭಾಗ ಚಟುವಟಿಕೆಗಳನ್ನು ಉದ್ಘಾಟಿಸಿ ಹಾಗೂ ವಿಭಾಗ ಚಟುವಟಿಕೆಗಳ ಪ್ರಶಸ್ತಿ ಪ್ರಧಾನ ಮಾಡಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು.ಹಿಂದಿ ಭಾಷೆಯಕಲಿಕೆಯು ಈಗ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಭಾμÁಕಲಿಕೆಯು ವಿಧ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ಮುಂದಿರುವಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಡಾ. ನಫೀಸತ್ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಉದಯಚಂದ್ರ ಭಾರತದಉತ್ತರ ಭಾಗದಲ್ಲಿ ಹಿಂದಿ ಕಡ್ಡಾಯ ಭಾಷೆಎನ್ನುವ ಮಟ್ಟಿಗೆಇದೆ,

ನಾವು ಅಲ್ಲಿಗೆ ಪ್ರಯಾಣ ಮಾಡಬೇಕಾದರೆ ಹಿಂದಿ ಭಾಷೆಅಗತ್ಯ, ಹೆಚ್ಚು ಭಾಷೆಗಳನ್ನು ಕಲಿಯುವುದುಕೂಡಅತ್ಯುತ್ತಮಅಭಿರುಚಿ, ಬೇರೆ ಬೇರೆ ಭಾಷೆಗಳನ್ನು ಕಲಿಯುತ್ತಿರಿಎಂದು ಶುಭ ಆರೈಸಿದರು. ಎಸ್.ಡಿ.ಎಂ. ಪದವಿಪೂರ್ವಕಾಲೇಜಿನ ಹಿಂದಿ ಉಪನ್ಯಾಸಕಿಡಾ| ಪ್ಲೇವಿಯಾ ಪೌಲ್‍ಅವರು ಹಿಂದಿ ವಿಧ್ಯಾರ್ಥಿ ಸಂಘವನ್ನುಉದ್ಘಾಟನೆ ಮಾಡಿ, ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು.

ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕ ಮಲ್ಲಿಕಾರ್ಜುನ್ ಮತ್ತುಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಅಕ್ಷಯ್ ಮತ್ತು ವಸುಮತಿ ನಿರೂಪಣೆ ಮಾಡಿ, ಮನೋರಂಜನ್ ಸ್ವಾಗತಿಸಿ, ಆದರ್ಶ್ ವಂದನಾರ್ಪಣೆ ಮಾಡಿದರು.

Related Posts

Leave a Reply

Your email address will not be published.

How Can We Help You?