ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್, ಬಿರುವೆರ್ ಕುಡ್ಲದ ನೇತೃತ್ವ ದಲ್ಲಿ ರಕ್ತದಾನ ಶಿಬಿರ

ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತ ದಾನ ಶಿಬಿರವನ್ನ ಮಂಗಳೂರಲ್ಲಿ ಆಯೋಜಿಸಲಾಗಿತ್ತು.

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ)ಆಶ್ರಯದಲ್ಲಿ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್ ನ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಶಾಸಕಡಿ. ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು,ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ ರಿಜಿಸ್ಟರ್ ಹಲವು ಸಮಾಜ ಮುಖಿ ಕಾರ್ಯ ತೊಡಗಿಸುವ ಮೂಲಕ ಬಡವರ ಕಣ್ಣೀರು ಹೊಗಲಾಡಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನು ನಿರಂತರ ರಕ್ತದಾನ ಶಿಬಿರಸಮಾನ ಮನಸ್ಕ ಯುವಕರ ತಂಡ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ನ ಶ್ರೀ ನರೇಶ್ ಶೆಣೈ,ಹನುಮಂತ್ ಕಾಮತ್,ಬಿರುವೆರ್ ಕುಡ್ಲ(ರಿ) ಸ್ಥಾಪಕ ಅಧ್ಯಕ್ಷರು ಶ್ರೀ ಉದಯ್ ಪೂಜಾರಿ,ಮಾಜಿ ಮೇಯರ್ ಶ್ರೀ ದಿವಾಕರ್ ಪಾಂಡೇಶ್ವರ,ನರೇಶ್ ಪ್ರಭು, ಚೇತನ್ ಕಾಮತ್,ಬಿರುವೆರ್ ಕುಡ್ಲ(ರಿ) ಉಪಾಧ್ಯಕ್ಷರು ರಾಕೇಶ್ ಸಾಲಿಯಾನ್ ಚಿಲಿಂಬಿ,ಕಿಶೋರ್ ಬಾಬು,ರಜತ್ ಕುಲಾಲ್,ಬಿರುವೆರ್ ಕುಡ್ಲ ಅಶೋಕ ನಗರ ಸಂಚಾಲಕಿ ಸುಮಂಗಲ. ಸಿ ಕೋಟ್ಯಾನ್,ನೀರೀಕ್ಷಾ,ಅಶ್ವಿತಾ ಅಮೀನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?