ಉಚ್ಚಿಲದಲ್ಲಿ ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ : ಹೊತ್ತಿ ಉರಿದ ಕ್ಯಾಂಟೀನ್

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶ್ರೀ ರಸ್ತು ಹೋಟೆಲ್ ಎದುರು ಲಾರಿಯೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಹರಿಯುತ್ತಿದ್ದ ತಂತಿಯೊಂದು ತೆಂಗಿನ ಗರಿಯಿಂದ ನಿರ್ಮಾಣ ಮಾಡಿದ ಕ್ಯಾಂಟಿನ್ ಮೇಲೆ ಬಿದ್ದ ಪರಿಣಾಮ ಕ್ಯಾಂಟೀನ್ ಹೊತ್ತಿ ಉರಿದ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ವಿದ್ಯುತ್ ಹರಿಯುತ್ತಿದ್ದ ತಂತಿ ಅಡ್ಡಾಲಾಗಿ ಇದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅರ್ಧ ತಾಸಿಗೂ ಅಧಿಕ ಸಮಯ ತಡೆಯಾಗಿದೆ. ತಂತಿ ಬೀಳುತ್ತಿರುವ ಸಂದರ್ಭ ಕೆಎಸ್ಆರ್ಟಿಸಿ ಬಸ್ಸೊಂದು ಕೂದಳೆಲೆಯ ಅಂತರದಲ್ಲಿ ಪಾರಾಗಿದೆ. ಕಾಪು ಅಪರಾಧ ವಿಭಾಗದ ಎಸ್ಐ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮೆಸ್ಕಾಂ ಸಿಬ್ಬಂದಿ ಮೂಲಕ ಹೆದ್ದಾರಿಯಲ್ಲಿದ್ದ ತಂತಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಹೆದ್ದಾರಿಯನ್ನು ಸುಗಮಗಮ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.