5.0 ತಂತ್ರಜ್ಞಾನ ಯುಗದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮಹತ್ವದ್ದು: ಐಐಎಂ ನಿರ್ದೇಶಕ ಡಾ. ಹೃಷಿಕೇಶ ಟಿ. ಕೃಷ್ಣನ್

ಬೆಂಗಳೂರು, ಜ 27; ನಾವೀಗ 5.0 ತಂತ್ರಜ್ಞಾನ ಯುಗದಲ್ಲಿದ್ದು, ಇಂತಹ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ರೂಢಿಸಿಕೊಳ್ಳುವಂತೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ – ಐಐಎಂ ನಿರ್ದೇಶಕ ಡಾ. ಹೃಷಿಕೇಶ ಟಿ ಕೃಷ್ಣನ್ ಕರೆ ನೀಡಿದ್ದಾರೆ.

ಆರ್.ವಿ. ಇನ್ಸ್ಟಿಟ್ಯೂಟ್ ನ 23 ನೇ ಬ್ಯಾಚ್ ಎಂ.ಬಿ.ಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೀಗ ಅಮೆರಿಕಾ ಭಯೋತ್ಪಾದಕ ದಾಳಿ, ಆರ್ಥಿಕ ಹಿಂಜರಿತ, ಕೋರಾನ ಬಿಕ್ಕಟ್ಟುಗಳಂತಹ ಸಮಸ್ಯೆಗಳನ್ನು ದಾಟಿ ಬಂದಿದ್ದು, ಮುಂಬರುವ ದಿನಗಳಲ್ಲಿ ಸ್ವಾತಂತ್ರ್ಯವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದರು.

ನಾವು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಪಕ್ಷಾತೀತವಾಗಿ ವರ್ತಿಸಬೇಕು. ಪರ್ಯಾಯಗಳನ್ನು ಚಿಂತಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು. ವ್ಯಾಪಾರ, ವಹಿವಾಟಿನಲ್ಲಿ ಎದುರಾಗಲಿರುವ ಅಪಾಯಗಳನ್ನು ಮುಂದಾಗಿಯೇ ಅರಿತುಕೊಳ್ಳುವ ಚತುರತೆ ಬೆಳೆಸಿಕೊಳ್ಳಬೇಕು ಎಂದರು.

ತಂತ್ರಜ್ಞಾನದಲ್ಲೂ ವ್ಯಾಪಕ ಬದಲಾವಣೆಯಾಗುತ್ತಿದ್ದು, ನಾವೀಗ 5.0 ತಾಂತ್ರಿಕ ಯುಗದಲ್ಲಿದ್ದೇವೆ. ಬಹುತೇಕ ಸಂಸ್ಥೆಗಳು ತನ್ನ ಸ್ಥಿತಿಗತಿಗಳನ್ನು ಬದಲಿಸಿಕೊಳ್ಳುತ್ತಿವೆ. ಬಹುತೇಕ ಕಂಪೆನಿಗಳು ಸಹಭಾಗಿತ್ವಕ್ಕೆ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದರಿಂದಾಗುವ ಲಾಭ, ನಷ್ಟ, ಬದಲಾವಣೆಗಳನ್ನು ಅರಿತು ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡುವ ನಿಪುಣತೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಇಂದು ಎಲ್ಲವೂ ಡಿಟಿಟಲ್ ತಂತ್ರಜ್ಞಾನವನ್ನು ಆಧರಿಸಿದೆ. ಪ್ರತಿಯೊಬ್ಬರೂ ತಂತ್ರಜ್ಞಾವನ್ನು ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಇದೀಗ ಡಿಜಿಟಲ್ ತಂತ್ರಜ್ಞಾನದ ಮಾರುಕಟ್ಟೆ ಎಲ್ಲೆಡೆ ಆವರಿಸಿಕೊಳ್ಳುತ್ತಿದ್ದು, ಮಾರುಕಟ್ಟೆಯ ಕಾರ್ಯತಂತ್ರಗಳ ಬಗ್ಗೆಯೂ ವಿಶೇಷ ಗಮನಹರಿಸಬೇಕು ಎಂದು ಐಐಎಂ ನಿರ್ದೇಶಕ ಡಾ. ಹೃಷಿಕೇಶ ಟಿ ಕೃಷ್ಣನ್ ಹೇಳಿದರು.

ಬಿ.ಎಚ್.ಐ.ವಿ.ಇ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಶೇಷ ರಾವ್ ಪಾಪ್ಲಿಕರ್, ಆರ್.ವಿ.ಐ.ಎಂ ನ ಆಡಳಿತ ಮಂಡಳಿಯ ಸದಸ್ಯ ಪಿ.ಎನ್. ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?