ಸ್ವಾಭಿಮಾನದ ನಡಿಗೆ ಯಶಸ್ವಿ ಖಂಡಿದೆ ಬೆಂಬಲ ನೀಡಿದ ಸಂಘಟನೆಗಳಿಗೆ ಅಭಿನಂದನೆ : ಬಿಲ್ಲವ ಮುಖಂಡ ಪದ್ಮರಾಜ್

ಕೇಂದ್ರ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನೀರಾಕರಿಸಿದ ವಿಚಾರವನ್ನು ಖಂಡಿಸಿ ನಡೆಸಿದ ಸ್ವಾಭಿಮಾನದ ನಡಿಗೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ನಡೆಯುವ ಮೂಲಕ ನಮ್ಮ ನಡಿಗೆ ಯಶಸ್ವಿ ಖಂಡಿದೆ ಎಂದು ಬಿಲ್ಲವ ಮುಖಂಡ ಪದ್ಮರಾಜ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಹಿಂದುಳಿದ ವರ್ಗದ ಜನರನ್ನ ತುಳಿಯುವುದು ಇನ್ನೂ ನಿಂತಿಲ್ಲ ಸ್ವಾಭಿಮಾನದ ನಡಿಗೆ ಪಕ್ಷತೀತವಾಗಿ ನಡೆಯುವ ಮೂಲಕ ಯಶಸ್ಸು ಕಂಡಿದೆ ಗುರುಗಳ ಅನುಯಾಯಿಗಳು ಈ ನಡಿಗೆಯಲ್ಲಿ ಭಾಗವಹಿಸಿದ್ದಾರೆ.

. ಇದು ನಮ್ಮ ಹೋರಾಟದ ಮುನ್ನುಡಿ ಮುಂದಿನ ದಿನಗಳಲ್ಲಿ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮುಂದಿಟ್ಟುಕೊಂಡು ಹಿರಿಯರಾದ ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಎಲ್ಲಾ ಹೋರಾಟವು ಪಕ್ಷತೀತವಾಗಿ ನಡೆಯುತ್ತದೆ ಎಂದು ಹೇಳಿದರು.ಈ ಸಂದರ್ಭ ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್, ಸೂರ್ಯಕಾಂತ್ ಮತ್ತು ದೇವೇಂದ್ರ ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?