ಕುರ್ನಾಡು ಪಿದಮಲೆ ಶ್ರೀ ಮಹಾಮ್ಮಾಯಿ ದೇವಸ್ಥಾನ : ಬ್ರಹ್ಮಕಲಶೋತ್ಸವ ಹಾಗೂ ಗೋಂದೋಲು ಪೂಜೆ

ಬಂಟ್ವಾಳ ತಾಲೂಕಿನ ಕುರ್ನಾಡುವಿನ ಪಿದಮಲೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಗೋಂದೋಲು ಪೂಜೆ ಜನವರಿ 30ರಿಂದ ಫೆಬ್ರವರಿ 4ರ ವರೆಗೆ ನಡೆಯಲಿದೆ.

ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಹೋಮ, ಹಾಗೂ ಗೋಂದೋಲು ಪೂಜೆಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಜನವರಿ 30ರಂದು ಶ್ರೀ ಕ್ಷೇತ್ರ ಮುಡಿಪಿನ್ನಾರ್ನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.

ಜನವರಿ 31ರಂದು ಭಜನಾ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ. ಫೆ.1ರಂದು ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಜರುಗಲಿದೆ. ಫೆ.2ರಂದು ಬ್ರಹ್ಮಕಲಶಾಭಿಷೇಕ ಜರುಗಲಿದೆ. ಫೆ.3ರಂದು ಚಂಡಿಕಾ ಹೋಮ, ಸಂಜೆ 6 ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ರಾತ್ರಿ 9.50ರಿಂದ ಗೋಂದೋಲು ಪೂಜೆ ನಡೆಯಲಿದೆ.
ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಮಹಾಮ್ಮಾಯಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಅಧ್ಯಕ್ಷರು ಜಗದೀಶ್ ಆಳ್ವ ಕುವೆತ್ತಬೈಲು, ಪ್ರಧಾನ ಕಾರ್ಯದರ್ಶಿ ಮೋಹನ್ದಾಸ್ ನಾಯಕ್ ಕುರ್ನಾಡು, ಗೌರವಾಧ್ಯಕ್ಷರಾದ ಕಿಶೋರ್ ನಾಯಕ್ ನಾಗುರಿ ಹಾಗೂ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.