ಚಿತ್ರಮಂದಿರಗಳ ಮೇಲೆ 50:50 ರೂಲ್ಸ್ ಏಕೆ? ಸಿನಿಮಾ ಮಂದಿ ಹೇಳುವುದೇನು?

ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೊಂಚ ಕಡಿಮೆ ಆಗಿದ್ದು, ಸರ್ಕಾರ ಜ.31ರಿಂದ ಎಲ್ಲಾ ಚಟುವಟಿಕಗಳ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದೆ. ಆದರೆ, ಚಿತ್ರಮಂದಿರ,ಜಿಮ್ ಸ್ವಿಮಿಂಗ್ ಪೂಲ್ ಗೆ ಮಾತ್ರ 50:50 ರೂಲ್ಸ್ ವಿಧಿಸಿರೋ ಸರ್ಕಾರದ ನಿಲುವು ನಿಜಕ್ಕೂ ಆಕ್ಷೇಪಾರ್ಹ ಎಂದು ಸಿನಿರಂಗದ ಹಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಥಿಯೇಟರ್‌ನಲ್ಲಿ 50:50 ಪ್ರೇಕ್ಷಕರಿಗಷ್ಟೇ ಅವಕಾಶ ಎಂಬ ರೋಲ್ಸ್‌ನಿಂದಾಗಿ ಬಿಡುಗಡೆಗೆ ಸಿದ್ದವಾಗಿದ್ದ “ಏಕ್ ಲವ್ ಯಾ”,”ವಿಕ್ರಾಂತ್ ರೋಣ” ಸಿನಿಮಾಗಳ ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ.

ಈಗಾಗಲೇ ”ಗರುಡ”, ”ಜಾಡಘಟ್ಟ”, ”ಹಳ್ಳಿ ಹೈಕ್ಳ ಪ್ಯಾಟೆಲೈಪು” ಮುಂತಾದ ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದು, ಸರ್ಕಾರದ ಈ ನಡೆ ನಿರ್ಮಾಪಕರು, ಹಂಚಿಕೆದಾರರಲ್ಲಿ ಕಳವಳ ಉಂಟು ಮಾಡಿದೆ.

ಈ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಮತ್ತು ಕಾರ್ಯದರ್ಶಿ ಎನ್.ಎಂ ಸುರೇಶ್ ಅವರು 50:50 ರೂಲ್ಸ್ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.

“ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ರೂಲ್ಸ್‌ಗಳಿಂದ ಚಿತ್ರರಂಗ ಈಗಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಇಂತಹ ಸಮಯದಲ್ಲಿ ಸರ್ಕಾರದ ಈ ನಿರ್ಬಂಧ ಸಿನಿಮಾಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ಇಂತಹ ಸಮಯದಲ್ಲಿ 50:50 ರೂಲ್ಸ್ ತರುವುದು ಸರಿಯಲ್ಲ. ಸರ್ಕಾರ ಚಿತ್ರಮಂದಿರಗಳಲ್ಲಿ ಕೊರೊನಾ ತಡೆಗಟ್ಟುವ ಅಗತ್ಯ ನಿಯಮಗಳನ್ನು ಅನುಸರಿಸಲು ಸೂಚಿಸಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕು”ಎಂದು ಚಿತ್ರ ಸಾಹಿತಿ ವಿಜಯ್ ಈಶ್ವರ್ ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?