ಜೇಸಿಐ ಪಂಜ ಪಂಚಶ್ರೀ ಸುಚೇತನ ಕಾರ್ಯಕ್ರಮ

ಜೇಸಿಐ ಪಂಜ ಪಂಚಶ್ರೀ ಸುಚೇತನ ಕಾರ್ಯಕ್ರಮ ಜೇಸಿಐ ಪಂಜ ಪಂಚಶ್ರೀ ಆಶ್ರಯದಲ್ಲಿ ಜನಪರ ಜನವರಿ ಕಾರ್ಯಕ್ರಮದಡಿಯಲ್ಲಿ ಸುಚೇತನ ಎಂಬ ಹೆಸರಿನೊಂದಿಗೆ ಜೇಸಿ ಸದಸ್ಯರಿಗೆ ಚೈತನ್ಯ ತುಂಬುವ ಬಹು ಘಟಕ ಸಮ್ಮಿಲನ ಕಾರ್ಯಾಗಾರ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ವಲಯ15ರ ತರಬೇತಿ ವಿಭಾಗದ ನಿರ್ದೇಶಕರು ಆಗಿರುವ ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷರಾದ ಶಿವಪ್ರಸಾದ ಹಾಲೆಮಜಲು ವಹಿಸಿದ್ದರು. ಅಂತರರಾಷ್ಟ್ರೀಯ ತರಬೇತುದಾರರು ಹಾಗೂ ಜೇಸಿಐ ಭಾರತದ ಆಥರ್ ಆಗಿರುವ ಪ್ರಮೋದ್ ಕುಮಾರ್ ರವರು ತರಬೇತಿ ನೀಡಿದರು.

ವೇದಿಕೆಯಲ್ಲಿ ಜೇಸಿಐ ಭಾರತದ ಪೂರ್ವ ನಿರ್ದೇಶಕರೂ ಆಗಿರುವ ಚಂದ್ರಶೇಖರ್ ನಾಯರ್, ನಿಕಟಪೂರ್ವ ಅಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ, ಕಾರ್ಯಕ್ರಮ ನಿರ್ದೇಶಕ ತೀರ್ಥ ನಂದ ಕೊಡಂಕಿರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೌಶಿಕ್ ಕುಳ ಧನ್ಯವಾದ ಸಮರ್ಪಣೆ ಮಾಡಿದರು.ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಸುಬ್ರಹ್ಮಣ್ಯದ ಸದಸ್ಯರುಗಳು ತರಬೇತಿಯಲ್ಲಿ ಭಾಗವಹಿಸಿದ್ದರು, ಸುಮಾರು 50ಜನ ಸದಸ್ಯರುಗಳು ತರಬೇತಿಯನ್ನು ಪಡಕೊಂಡರು.ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಪೂರ್ವ ಅಧ್ಯಕ್ಷರುಗಳು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ ಇದರ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.

Related Posts

Leave a Reply

Your email address will not be published.

How Can We Help You?