ಕೇಂದ್ರದ 2022-23ನೇ ಸಾಲಿನ ಬಜೆಟ್ ಮಂಡನೆ

ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ಮಂಡನೆ ಆರಂಭವಾಗಿದ್ದು, ಸಂಸತ್‍ನಲ್ಲಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಆರೋಗ್ಯ ಮತ್ತು ಆರ್ಥಿಕತೆ ಸಮಸ್ಯೆ. ನಾವು ಆಜಾದಿ ಅಮೃತ ಮಹೋತ್ಸವ ಆಚರಿಸಿದ್ದೇವೆ. ಕೋವಿಡ್ ಮಧ್ಯೆಯೇ ಭಾರತ ಆರ್ಥಿಕ ಚೇತರಿಕೆ ಕಾಣುತ್ತಿದೆ.ವಿಶ್ವದಲ್ಲಿಯೇ ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯ. ನಾಗರಿಕರನ್ನು ಸಶಕ್ತಗೊಳಿಸುವ ಆದ್ಯತೆ ನಮ್ಮ ಸರ್ಕಾರದ್ದಾಗಿದೆ.
ಶೀಘ್ರದಲ್ಲಿಯೇ ಎಲ್ ಐಸಿಯಿಂದ ಬಂಡವಾಳ ಹಿಂತೆಗೆತ, ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು. ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಒತ್ತು. ದೇಶದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಏರ್ ಇಂಡಿಯಾ ಮೇಲಿನ ಬಂಡವಾಳ ಸಂಪೂರ್ಣ ಹಿಂತೆಗೆಯಲಾಗಿದೆ. ಪಿಎಂ ಗತಿ ಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಗಲಿದೆ. ದೇಶದ ಜಿಡಿಪಿ ಶೇ.9.2ರಷ್ಟು ಬೆಳವಣಿಗೆ.ರಸ್ತೆ ನಿರ್ಮಾಣಕ್ಕೆ ಪ್ರಮುಖ ಆದ್ಯತೆ. 25 ಸಾವಿರ ಹೆಚ್ಚುವರಿ ಹೂಡಿಕೆ ಮಾಡಲಾಗುತ್ತಿದೆ. 2022ರ ಬಜೆಟ್ ಗೆ 4 ಆಧಾರ ಸ್ತಂಭಗಳು. ವೇಗದ ಸುರಕ್ಷಿತ ಸಾಗಾಣಿಕೆಗೆ ಆದ್ಯತೆ.

Related Posts

Leave a Reply

Your email address will not be published.

How Can We Help You?