ಯು.ಟಿ. ಖಾದರ್ : ತೊಕ್ಕೊಟ್ಟು ಕೊರಗಜ್ಜನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ

ಉಳ್ಳಾಲ: ವಿಪಕ್ಷ ಉಪನಾಯಕನಾಗಿ ಆಯ್ಕೆಯಾಗಿರುವುದು ತನ್ನ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಾಗೂ ಜನಸಾಮಾನ್ಯರಿಗೆ ಸಂದ ಗೌರವವಾಗಿದೆ. ಇದು ಸ್ಥಾನಮಾನಕ್ಕಿಂತ ಸಿಕ್ಕಂತಹ ದೊಡ್ಡ ಜವಾಬ್ದಾರಿಯಾಗಿದೆ. ಪ್ರಾಮಾಣಿಕತೆಯಿಂದ ಕಠಿಣ ಪರಿಶ್ರಮ ವಹಿಸಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು.

ವಿಪಕ್ಷ ಉಪನಾಯಕನಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಓವರ್ಬ್ರಿಡ್ಜ್ ಜೈವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ಶ್ರೀ ಕೊರಗಜ್ಜ ಸೇವಾ ಸಮಿತಿ ಓವರ್ ಬ್ರಿಡ್ಜ್ ತೊಕ್ಕೊಟ್ಟುವಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಆದೇಶದಂತೆ ನೇಮಕಗೊಂಡಿದ್ದೇನೆ. ನೇಮಕಕ್ಕೆ ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸರ್ಜಿವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಮಲ್ಲಿಕಾರ್ಜುನ ಖರ್ಗೆಯವರು ಸೇರಿದಂತೆ ರಾಜ್ಯದ ಮುಖಂಡರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಉಳ್ಳಾಲ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಹಾಗೂ ಸಹೋದರತೆಯ ಕ್ಷೇತ್ರವನ್ನಾಗಿ ಮಾಡಲು ಇನ್ನಷ್ಟು ಪ್ರಯತ್ನಿಸುತ್ತೇನೆ ಎಂದರು.
ಶ್ರೀ ಕೊರಗಜ್ಜ ಸೇವಾ ಸಮಿತಿ ಓವರ್ ಬ್ರಿಡ್ಜ್ ಇದರ ಅಧ್ಯಕ್ಷ ಮೋಹನ್ ದಾಸ್, ಮದ್ಯಸ್ಥರು ಹಾಗೂ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್, ಜೈ ವೀರಮಾರುತಿ ವ್ಯಾಯಾಮ ಶಾಲೆಯ ವಿಠಲ ಶ್ರೀಯಾನ್, ಕಾಂಗ್ರೆಸ್ ಮುಖಂಡರಗಳಾದ ಸದಾಶಿವ ಉಳ್ಳಾಲ್, ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರದ್ದರು.