ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನ

ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಶೋಕ್ ರಾವ್ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಈಗ ಮೃತಪಟ್ಟಿದ್ದು, ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ತೀವ್ರ ನೋವು ಉಂಟಾಗಿದೆ. ಡಾ. ರಾಜ್‍ಕುಮಾರ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಜೊತೆ ಅಶೋಕ್ ರಾವ್ ತೆರೆಹಂಚಿಕೊಂಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರ ಅನುಭವ ಅಪಾರ. ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾತ್ರಿ 12.30ಕ್ಕೆ ಅವರು ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ಮಗಳು ಹಾಗೂ ಮಗನನ್ನು ಅಶೋಕ್ ರಾವ್ ಅಗಲಿದ್ದಾರೆ.

ಹಲವು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಅಶೋಕ್ ರಾವ್ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು. ವಿಲನ್ ಪಾತ್ರಗಳ ಮೂಲಕ ಅವರು ಮಿಂಚಿದ್ದರು. ಡಾ. ರಾಜ್ ಕುಮಾರ್ ನಟನೆಯ ಪರಶುರಾಮ್’ ಸಿನಿಮಾದಲ್ಲಿ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅಶೋಕ್ ರಾವ್ ಅವರ ಪ್ರತಿಭೆಯನ್ನು ಗಮನಿಸಿದ್ದ ರಾಜ್‍ಕುಮಾರ್ ಅವರೇ ಕರೆದುಪರಷುರಾಮ್ ಸಿನಿಮಾದ ವಿಲನ್ ಪಾತ್ರವನ್ನು ಅವರಿಗೆ ನೀಡಿದ್ದರು.ಅಶೋಕ್ ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ತಮಿಳುನಾಡಿನಲ್ಲಿ ಅವರು ವಿದ್ಯಾಭಾಸ ಪಡೆದರು. ಸೇಲಂ ಬಳಿಯ ಒಂದು ವಸತಿ ಶಾಲೆಯಲ್ಲಿ ಅಶೋಕ ರಾವ್ ಶಿಕ್ಷಣ ಪಡೆದರು. ಆಗಲೇ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಸಿಕ್ಕವು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.

Related Posts

Leave a Reply

Your email address will not be published.

How Can We Help You?