ಪಡುಬಿದ್ರೆ: ಬಲೆಗೆ ಸಿಕ್ಕಿ ಬಿದ್ದ ಕೇರೆ ಹಾವು ರಕ್ಷಿಸಿದ ಪ್ರಾಣಿಪ್ರಿಯ

ಬಲೆಗೆ ಬಿದ್ದು ಸಾವು ಬದುಕಿನ ನಡುವೆ ಒದ್ದಾಟ ನಡೆಸುತ್ತಿದ್ದ ಬೃಹತ್ ಕೇರೆ ಹಾವು ಒಂದನ್ನು ಪಣಿಯೂರು ಮೂಲದ ಪ್ರಾಣಿಪ್ರಿಯ ವ್ಯಕ್ತಿಯೊರ್ವರು ಬಲೆಯಿಂದ ಮುಕ್ತಗೊಳಿಸಿ ಜೀವದಾನ ನೀಡಿದ್ದಾರೆ.

ಪಣಿಯೂರು ನಿವಾಸಿ ಮೋಹನ್ ದಾಸ್ ಎಂಬವರೇ ವ್ಯಕ್ತಿಯಾಗಿದ್ದಾರೆ.

ಉದ್ಯಮಿಯಾಗಿರುವ ಇವರು ಪಣಿಯೂರಿನಲ್ಲಿ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಪ್ರಾಣಿಗಳ ಸೇವೆ ನಡೆಸುತ್ತಿದ್ದ ಇವರಿಗೆ ಸಾರ್ವಜನಿಕರೊರ್ವರು ಕರೆ ಮಾಡಿ ಕೇರೆ ಹಾವಿನ ದುಸ್ಥಿತಿ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಮೋಹನ್ ದಾಸ್ ಕೇರೆ ಹಾವನ್ನು ಬಂಧ ಮುಕ್ತಗೊಳಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Related Posts

Leave a Reply

Your email address will not be published.

How Can We Help You?