ಕಲಿಕೆಯ ಜ್ಞಾನಕ್ಕೆ ಹೆಣ್ಣು-ಗಂಡೆಂಬ ತಾರತಮ್ಯವಿಲ್ಲ: ಡಾ.ಶಲೀಪ್

ಉಜಿರೆ: ಜೀವನ ವಿಜ್ಞಾನ ಪ್ರತಿಯೊಬ್ಬರ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳಲು ದಿನನಿತ್ಯದ ಚಟುವಟಿಕೆಗಳನ್ನು ಶಿಸ್ತು ಮತ್ತು ಕ್ರಮಬದ್ಧವಾಗಿ ನರ‍್ವಹಿಸಲು ಸಹಕಾರಿಯಾಗಿದೆ ಎಂದು ಶ್ರೀ.ಧ.ಮ.ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಲೀಪ್ ಕುಮಾರಿ ಅಭಿಪ್ರಾಯಪಟ್ಟರು.
ಇವರು ಇತ್ತೀಚಿಗೆ ನಡೆದ ಉಜಿರೆಯ ಶ್ರೀ.ಧ.ಮ. ಪದವಿ ಕಾಲೇಜಿನ ಗೃಹ ವಿಜ್ಞಾನ ವಿಭಾಗ ರ‍್ಪಡಿಸಿದ್ದ ಆಹಾರಮೇಳ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆಯ ಜ್ಞಾನಕ್ಕೆ ಹೆಣ್ಣು-ಗಂಡೆಂಬ ತಾರತಮ್ಯವಿಲ್ಲ. ಅಡುಗೆ ತಯಾರಿಸುವಿಕೆ, ಮನೆಯ ನರ‍್ವಹಿಸುವಿಕೆ ಪ್ರತಿಯೊಬ್ಬರೂ ಕಲಿತುಕೊಳ್ಳಬೇಕು. ಅಡುಗೆಮನೆ ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಚಂದ್ರ ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಜೀವನ ಪಾಠ ಇಂದು ವಿಭಾಗವಾಗಿ ಬೋಧಿಸುವ ಅಧ್ಯಾಯವಾಗಿ ಮರ‍್ಪಟ್ಟಿದೆ, ದೇಶಿಯ ಆಹಾರಗಳ ಮಹತ್ವ ಅರಿತುಕೊಳ್ಳಬೇಕು ಎಂದು ನುಡಿದರು.
ಕರ‍್ಯಕ್ರಮದಲ್ಲಿ ಸ್ವತಃ ವಿದ್ಯರ‍್ಥಿಗಳು ತಯಾರಿಸಿದ ನಾನಾ ರೀತಿಯ ಆಹಾರ ಪದರ‍್ಥಗಳನ್ನು ಪ್ರರ‍್ಶಿಸಿ ವ್ಯವಹಾರ ಶೈಲಿಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಯಿತು.

ಕರ‍್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯರ‍್ಥಿಗಳು ಭಾಗಿಯಾಗಿದ್ದರು. ವೇದಿಕೆಯಲ್ಲಿ ಗೃಹ ವಿಜ್ಞಾನ ವಿಭಾಗ ಮುಖ್ಯಸ್ಥೆ ಯಾದ ಸಹಪ್ರಾಧ್ಯಾಪಕಿ ಶೋಭಾ ಹಾಗೂ ಕಾಲೇಜಿನ ಅಕೌಂಟ್ಸ್ ಸೂಪರಿಡೆಂಟ್ ಯುವರಾಜ್ ಪೂವಣೆ ಉಪಸ್ಥಿತರಿದ್ದರು. ವಿದ್ಯರ‍್ಥಿ ದೀಪ ನಿರೂಪಿಸಿ, ಲಾವಣ್ಯ ಸ್ವಾಗತಿಸಿ, ತೃಪ್ತಿ ವಂದಿಸಿದರು.
-ವರದಿ:ಅರವಿಂದ

Related Posts

Leave a Reply

Your email address will not be published.

How Can We Help You?