ದಕ್ಷಿಣ ಚಿತ್ರರಂಗವನ್ನು ಹೊಗಳಿದ ನಟಿ ಶ್ರುತಿ ಹಾಸನ್
ನನ್ನ ಕಲೆಯನ್ನು ಹಿಂದಿಗೆ ಹೋಲಿಸಿದರೆ ತೆಲುಗು ಮತ್ತು ತಮಿಳು ಚಿತ್ರರಂಗಗಳು ಚೆನ್ನಾಗಿ ಬಳಸಿಕೊಂಡಿವೆ. ಬಹುಕೋಟಿ ವೆಚ್ಚದ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ ನನಗೆ ಯಶಸ್ಸು ತಂದುಕೊಟ್ಟಿರುವುದ ಮಾತ್ರ ದಕ್ಷಿಣದ ಸಿನಿಮಾಗಳು ಎಂದು ನಟಿ ಶ್ರುತಿ ಹಾಸನ್ ತಮ್ಮ ಸಿನಿವೃತ್ತಿಯನ್ನು ವಿಶ್ಲೇಷಿಸಿದ್ದಾರೆ.
ನನ್ನ ಮೊದಲ ಚಿತ್ರಗಳನ್ನು ಆಯ್ಕೆ ಮಾಡುವಾಗ ಯಾವ ರೀತಿಯ ಕಥೆಗೆ ಹೊಂದಿಕೆ ಆಗುತ್ತೇನೆ, ಎಂಥ ಕಥೆಯನ್ನುಆಯ್ಕೆ ಮಾಡಬೇಕು ಎನ್ನುವ ವಿಷಯದಲ್ಲಿ ಎಡವಿದ್ದೇನೆ. ಸಿನಿ ಪಯಣದಲ್ಲಿ ಸಾಕಷ್ಟು ಏಳು- ಬಿಳುಗಳನ್ನು ಕಂಡು ನೆಲೆ ಹುಡುಕಲು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಶುರುಮಾಡಿದೆ ಎಂದು ಅವರು ಹೇಳಿದ್ದಾರೆ.
“ಈಗ ಹಿಂದಿರುಗಿ ಒಮ್ಮೆ ನನ್ನ ಪ್ರಯಾಣ ಗಮನಿಸಿದರೆ, ದೀರ್ಘಕಾಲದ ಪ್ರಯತ್ನವನ್ನು ಉಳಿಸಿಕೊಂಡು ಸಾಗುವುದೇ ದೊಡ್ಡ ಸಾಧನೆ ಎನಿಸಿದೆ. ಇದು ಸ್ಪರ್ಧಾತ್ಮಕ ಜಗತ್ತು ಇಲ್ಲಿ ಇಷ್ಟು ವರ್ಷಗಳ ಕಾಲ ನೆಲೆ ನಿಂತಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಹೇಳಿದ್ದಾರೆ.
ಹಿಂದಿ ಚಿತ್ರಗಳಲ್ಲಿ ನಟಿಸಲು ದೃಢ ಸಂಕಲ್ಪಅಗತ್ಯ. ದೊಡ್ಡ ವೆಚ್ಚದ ‘ವೆಲ್ ಕಂ ಬ್ಯಾಕ್’ ಅಥವಾ ‘ದಿ ಡೇ’ ಚಿತ್ರಗಳು ಅಭಿಮಾನಿಗಳ ಪ್ರೀತಿ ತಂದುಕೊಟ್ಟಿದೆ. ನನ್ನಗೆ ದಕ್ಷಿಣ ಚಿತ್ರರಂಗವೆಂದರೆ ಇಷ್ಟ ಯಾವುದೇ ಕಾರಣಕ್ಕೂ ತೆಲುಗು ಚಿತ್ರಗಳಿಗೆ ಇಲ್ಲ ಅನ್ನುವುದಿಲ್ಲ. ನಮ್ಮನ್ನು ಯಾರು ಒಪ್ಪುತ್ತಾರೋ, ಪ್ರೀತಿಸುತ್ತಾರೋ ಅಲ್ಲಿ ಇರುವುದು ಉತ್ತಮ ಎಂದು ನನಗೆ ಮನವರಿಕೆಯಾಗಿದೆ. ನನಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ ತೆಲುಗು ಚಿತ್ರರಂಗ ನನ್ನ ತವರುನೆಲ ಎನ್ನುವ ಭಾವನೆ ನನ್ನಲ್ಲಿದೆ.
ಆಶ್ಚರ್ಯವೆಂಬಂತೆ ಈಗ ಹಿಂದಿಯ ವೆಬ್ ಸಿರೀಸ್ನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದೆ. ‘ಪುದಂ ಪುದು ಕಾಲೈ’ ಮತ್ತು ’ಪಿಟ್ಟ ಕಥಲು’ ಸೇರಿ ತಮಿಳು- ತೆಲುಗಿನ ಅಭಿನಯದ ನಂತರ ಮುಂಬರುವ ಪ್ರೈಮ್ ವಿಡಿಯೋದ ಸೈಕಲಾಜಿಕಲ್ ಥ್ರಿಲ್ಲರ್ ಸಿರೀಸ್ ‘ಬೆಸ್ಟ್ ಸೆಲ್ಲರ್’ನಲ್ಲಿ ನಟಿಸಲು ಅವಕಾಶ ದೊರೆತಿದೆ. ಈ ವೆಬ್ಸೀರೀಸ್ 8 ಸಂಚಿಕೆಯ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಸಿದ್ದಾರ್ಥ ಮಲ್ಹೋತ್ರಾ ನಿರ್ಮಾಣದಲ್ಲಿ ಮುಕಲ್ ಅಭ್ಯುಕರ್ ನಿರ್ದೇಶಿಸುತ್ತಾರೆ.