ವಿವಿಧ ಬೇಡಿಕೆಗಳ ಈಡೇರಿಕೆಗೆ‌ ಆಗ್ರಹಿಸಿ ಭಾರತ್ ಗ್ಯಾಸ್ ಲಾರಿ‌ ಚಾಲಕರ ಸಂಘದಿಂದ ಧರಣಿ

ವೇತನ‌ ಹೆಚ್ಚಳ, ಕರ್ತವ್ಯದ ಸಂದರ್ಭದಲ್ಲಿ ಆರೋಗ್ಯ, ಸುರಕ್ಷಾ ವ್ಯವಸ್ಥೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಬಿಪಿಸಿಎಲ್ ಅಡುಗೆ ಅನಿಲ ಸಿಲಿಂಡರ್ ಸಾಗಿಸುವ ಲಾರಿ ಚಾಲಕರು “ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘ (ಸಿಐಟಿಯು)” ದ ನೇತೃತ್ವದಲ್ಲಿ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಿಪಿಸಿಎಲ್ ಘಟಕದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

Bharat Gas Lorry Drivers' Association

ಐದು ವರ್ಷಗಳ ಹಿಂದೆ ನಿಗದಿಯಾಗಿರುವ ಚಾಲಕ ವೇತನವು ಸತತ ಮನವಿಗಳ ಹೊರತಾಗಿಯೂ ಹೆಚ್ಚಳಗೊಂಡಿರಲಿಲ್ಲ. ಬಿಪಿಸಿಎಲ್ ಘಟಕದಲ್ಲಿ ಲೋಡಿಂಗ್ ಸಂದರ್ಭ ಹಾಗೂ ದೂರ ಪ್ರದೇಶಗಳ ಗ್ಯಾಸ್ ಏಜನ್ಸಿಗಳ ಗೋಡೌನ್ ಗಳಲ್ಲಿ ಮೂಲಭೂತ ಸೌಲಭ್ಯಗಳು, ಆರೋಗ್ಯ, ಸುರಕ್ಷಾ ಕ್ರಮಗಳಿಗಾಗಿ ಬೇಡಿಕೆ ಪಟ್ಟಿ ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಕ್ರಮಗಳು ಜರುಗಿರಲಿಲ್ಲ. ಆ ಹಿನ್ನಲೆಯಲ್ಲಿ ಇಂದು ಲಾರಿ ಚಾಲಕರು ಬೈಕಂಪಾಡಿಯ ಬಿಪಿಸಿಎಲ್ ಘಟಕ ಪ್ರಧಾನ ದ್ವಾರದ ಮುಂಭಾಗ ದರಣಿ ನಡೆಸಿ ಕಂಪೆನಿಯ ಅಧಿಕಾರಿಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಿದರು. ಹದಿನೈದು ದಿನಗಳಲ್ಲಿ ಮಾತುಕತೆ ನಡೆಯದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘದ ಸಲಹೆಗಾರರಾದ ಮುನೀರ್ ಕಾಟಿಪಳ್ಳ, ಅಧ್ಯಕ್ಷರಾದ ದಯಾನಂದ ಸಾಲಿಯಾನ್ ಪಾವೂರು, ಕಾರ್ಯದರ್ಶಿ ನಾಸಿರ್ ಮುಖಂಡರಾದ ಸುರೇಶ್, ರವಿ ಪೂಜಾರಿ, ಮುಹಮ್ಮದ್ ನೆಲ್ಯಾಡಿ, ಮುಹಮ್ಮದ್ ತಾಹಿರ್, ಮುಹಮ್ಮದ್ ಸತ್ತಿಗಲ್ಲು, ಮುತ್ತು ರೆಡ್ಡಿ, ಫಾರೂಕ್, ಸಲೀಂ ಸಿರ್ಸಿ, ಫರ್ಹಾನ್, ಸುಭಾಷ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

Related Posts

Leave a Reply

Your email address will not be published.

How Can We Help You?