ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಗಣ್ಯರೇ ಗೈರು : ವಿದ್ಯಾರ್ಥಿನಿರಿಗೆ ನಿರಾಸೆ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾರ್ಯಕ್ರಮವಾದರೂ, ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆ ಸಚಿವರಾದಿಯಾಗಿ ಬಹುತೇಕ ಎಲ್ಲ ಗಣ್ಯರೂ ಗೈರಾಗಿದ್ದರು. ಶಾಸಕರು, ಮೇಯರ್ ಅವರನ್ನು ಕಾರ್ಯಕ್ರಮಕ್ಕೆ ನಿರೀಕ್ಷೆ ಮಾಡಿದ್ದರೂ ಕೂಡ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಸರಕಾರದ ಹೊಸ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳೇ ನಿರುತ್ಸಾಹ ತೋರಿಸುವ ಕೆಲಸ ಮಾಡುವ ಪ್ರಸಂಗ ನಡೆಯಿತು.


ಇಲಾಖಾ ಅಧಿಕಾರಿಗಳನ್ನು ಹೊರತುಪಡಿಸಿ, ಡಿಸಿ, ಸಿಇಒ ಅವರೂ ಇರಲಿಲ್ಲ. ಕೊನೆಗೆ ನಿಗಮದ ಅಧ್ಯಕ್ಷರೇ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವರ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಕಾದಿದ್ದ ವಿದ್ಯಾರ್ಥಿನಿಯರು ಬಹಳ ನಿರಾಸೆ ಅನುಭವಿಸಿದರು.