ಶಾಂತಿಶ್ರೀ ಅವರನ್ನು ಜೆಎನ್‌ಯು ಉಪಕುಲಪತಿಯಾಗಿ ನೇಮಿಸಿದ ಸರ್ಕಾರ; ವಿರೋಧ

ಭಾರತದ ಉತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ಕ್ಕೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ಉಪಕುಲಪತಿಯನ್ನಾಗಿ ಸೋಮವಾರ ನೇಮಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿದಾದಗಳಲ್ಲಿ ಗುರುತಿಸಿಕೊಂಡಿದ್ದ 59 ವರ್ಷದ ಶಾಂತಿಶ್ರೀ ಅವರು ಜೆಎನ್‌ಯುನಲ್ಲಿ ಉನ್ನತ ಹುದ್ದೆಯನ್ನು ಪಡೆದಿದ್ದಾರೆ. ಅಲ್ಲದೆ, ಅವರು ಜೆಎನ್‌ಯುನಲ್ಲಿ ಈ ಹುದ್ದೆಯನ್ನು ಪಡೆದ ಮೊದಲ ಮಹಿಳೆಯೂ ಆಗಿದ್ದಾರೆ.

ಶಾಂತಿಶ್ರೀ ಅವರು ತಮ್ಮತ್ತ ಗಮನಸೆಳೆದದ್ದು, ಅವರ ತಜ್ಞತೆಯ ಹೊರತಾಗಿ ಟ್ವಿಟರ್‌ ಪೋಸ್ಟ್‌ಗಳಿಂದ, @SantishreeD ಎಂಬ ಟ್ವಿಟರ್‌ ಹ್ಯಾಂಡಲ್‌ ಬಳಸುತ್ತಿರುವ ಅವರು, ಮಹಾತ್ಮ ಗಾಂಧಿಯವರ ಹತ್ಯೆ ಹಾಗೂ ಬಿಜೆಪಿಯ ವಿರೋಧಿಗಳು, ಅಲ್ಪಸಂಖ್ಯಾತರು ಮತ್ತು ರೈತಾಂದೋಲನದ ರೈತ ನಾಯಕರನ್ನು ಟೀಕಿಸಿ ತೀಕ್ಷ್ಣವಾದ ಟ್ವೀಟ್‌ಗಳನ್ನು ಮಾಡಿದ್ದರು.

ಅವರು, ಕೆಲವು ಟ್ವೀಟ್‌ಗಳನ್ನು ನಂತರದಲ್ಲಿ ಅಳಿಸಿದರು. ಆದರೂ, ಅವರ ವಿಷಕಾರಿ ಟ್ವೀಟ್‌ಗಳ ಸ್ಕ್ರೀನ್ ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಅವರ ಟ್ವೀಟ್‌ಗಳಲ್ಲಿ ಒಂದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು “ಇಟಾಲಿಯನ್ ರಿಮೋಟ್ ಕಂಟ್ರೋಲ್” ಎಂದು ಕರೆದಿದ್ದರು. ಮತ್ತೊಂದು ಟ್ವೀಟ್‌ನಲ್ಲಿ, “ಮುಸ್ಲಿಮೇತರರು ಲವ್ ಜಿಹಾದ್‌ ಮತ್ತೊಂದು ಬಗೆಯ ಭಯೋತ್ಪಾದನೆಯಾಗಿದೆ, ಅದರ ವಿರುದ್ದ ಜನರು ಎಚ್ಚರಗೊಳ್ಳಬೇಕು” ಎಂದು ಪೋಸ್ಟ್‌ ಮಾಡಿದ್ದರು. ಅಲ್ಲದೆ, ಕೆಲವು ಟ್ವೀಟ್‌ಗಳು ಜೆಎನ್‌ಯು, ಜಾಮಿಯಾ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜನ್ನು ಗುರಿಯಾಗಿಸಿಕೊಂಡು, ಈ ಸಂಸ್ಥೆಗಳಿಗೆ ಧನಸಹಾಯವನ್ನು ನಿಷೇಧಿಸಬೇಕು ಎಂದು ಕರೆ ಕೊಟ್ಟಿದ್ದರು.

ಜೆಎನ್‌ಯುಗೆ ಧನಸಹಾಯವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದವರನ್ನೇ, ಅದರ ಉಪಕುಲಪತಿಯಾಗಿ ನೇಮಿಸಿದ್ದಾಋಎ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಂತಿಶ್ರೀ ಅವರ ನೇಮಕಾತಿಯನ್ನು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಟೀಕಿಸಿದ್ದು, “ಜೆಎನ್‌ಯುನ ಹೊಸ ಉಪಕುಲಪತಿಗಳು ಕ್ರಿಶ್ಚಿಯನ್ನರನ್ನು ‘ಅಕ್ಕಿ ಚೀಲ ಮತಾಂತರರು’ ಎಂದು ಉಲ್ಲೇಖಿಸಿದ್ದರು. ಅವರು ಈಗ ಭಾರತದ ಗಣ್ಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದಾರೆರೆ. JNU ನಲ್ಲಿ ಕ್ರಿಶ್ಚಿಯನ್ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಮತ್ತು ಇದು ಭಾರತೀಯ ಸರ್ಕಾರದ ನೀತಿಯೇ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಶಾಂತಿಶ್ರೀ ಅವರು ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ಅವರು ಜೆಎನ್‌ಯುನ ಹಳೆಯ ವಿದ್ಯಾರ್ಥಿಯಾ ಕೂಡ. ಜೆಎನ್‌ಯುನಲ್ಲಿ ಅವರು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಎಂಫಿಲ್ ಮತ್ತು ಪಿಎಚ್‌ಡಿ ಪಡೆದಿದ್ದಾರೆ. ಈಗ ಅವರು ಜೆಡಿಎಸ್‌ ವಿಸಿ ಆಗಿದ್ದಾರೆ. ಜೆಎನ್‌ಯುನಲ್ಲಿ ಅವರ ಅಧಿಕಾರವು ಐದು ವರ್ಷಗಳವರೆಗೆ ಇರುತ್ತದೆ.

ರಷ್ಯಾದಲ್ಲಿ ಜನಿಸಿದ ಶಾಂತಿಶ್ರೀ, ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನಲ್ಲಿ ಮುಗಿಸಿದರು. ಅವರು 1983 ರಲ್ಲಿ ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇತಿಹಾಸ ಮತ್ತು ಸಾಮಾಜಿಕ ಮನೋವಿಜ್ಞಾನದಲ್ಲಿ ಬಿಎ ಮತ್ತು ಎಂಎ ಪದವಿ ಪಡೆದರು.

ಜೆಎನ್‌ಯುನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?