ಬಂಟ್ವಾಳ ತಾಲೂಕಿಗೂ ವ್ಯಾಪಿಸಿದ ಹಿಜಾಬ್ ವಿವಾದ

ಬಂಟ್ವಾಳ: ಹಿಜಾಬ್ ವಿವಾದ ಬಂಟ್ವಾಳ ತಾಲೂಕಿಗೂ ವ್ಯಾಪಿಸಿದೆ.ಶಾಲಾ ವಸ್ತ್ರ ಸಂಹಿತೆ ಜಾರಿಯಾಗಬೇಕು, ಕಾಲೇಜಿಗೆ ಸಮವಸ್ತ್ರ ಧರಿಸಿಯೇ ಆಗಮಿಸುವ ಎಂದು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಅವರಣದಲ್ಲಿ ಘೋಷಣೆ ಕೂಗಿದ ಘಟನೆ ವಾಮದಪದವುವಿನಲ್ಲಿ ನಡೆಯಿತು. ಕೇಸರಿ ಶಾಲು ಹಾಕಿಕೊಂಡು ಕಾಲೇಜು ಅವರಣದೊಳಗೆ ಆಗಮಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸ್ಕಾರ್ಪ್ ಧರಿಸಿ ಕಾಲೇಜಿಗೆ ಆಗಮಿಸುವುದನ್ನು ನಿರ್ಭಂಧಿಸಬೇಕು ಅಂತ ಘೋಷಣೆ ಕೂಗಿದರು.

vamadapadavu

ವಾಮದಪದವು ಕಾಲೇಜಿನಲ್ಲಿ ಸ್ಕಾರ್ಪ್ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಕಾಲೇಜಿನ ಸಮವಸ್ತ್ರ ಧರಿಸಿ ಕ್ಲಾಸಿನೊಳಗೆ ಬರಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರು ಸಮವಸ್ತ್ರ ಹಾಕದೇ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಪೋಷಕರನ್ನು ಕರೆದು ಕಾಲೇಜಿನಲ್ಲಿ ಸಭೆ ನಡೆಸಿದ್ದಾರೆ.

ಕಾಲೇಜಿನ ನಿಯಮಗಳನ್ನು ಪಾಲಿಸಿಕೊಂಡು ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ಕಾಲೇಜು ಪ್ರಾಂಶುಪಾಲರು ಪೆÇೀಷಕರಿಗೆ ತಿಳಿಸಿದ್ದಾರೆ.ಅದಕ್ಕೆ ಸಮ್ಮತಿ ಸೂಚಿಸಿದ ಅವರು ಕಾಲೇಜಿನ ನಿಯಮಗಳನ್ನು ಪಾಲನೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?