ಫೆ.26-27ಕ್ಕೆ ಹೆಜಮಾಡಿಯಲ್ಲಿ”ಬಿರುವೆರ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟ

ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೃಹತ್ ಮೊತ್ತದ ಹೆಜಮಾಡಿ ಬಿರುವೆರ್ ಬ್ರದರ್ಸ್ ಆಶ್ರಯದಲ್ಲಿ, ಬಿಲ್ಲವ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಜನ್ -1 ಹೆಜಮಾಡಿಯ ರಾಜೀವಗಾಂಧಿ ಕ್ರೀಢಾಂಗಣ ಬಸ್ತಿಪಡ್ಪು ಮೈದಾನದಲ್ಲಿ ಇದೇ ಫೆಬ್ರುವರಿಯಲ್ಲಿ 26 ಹಾಗೂ 27ರಂದ್ದು ಅದ್ದೂರಿಯಾಗಿ ನಡೆಯಲಿದೆ.

ಈ ಕ್ರಿಕೆಟ್ ಪಂದ್ಯಾವಳಿಯ ಪೂರ್ವಬಾವಿಯಾಗಿ ಕ್ರಿಕೆಟ್ ಆಟಗಾರರ ಆಯ್ಕೆ ಪ್ರಕ್ರಿಯೆ ಪಡುಬಿದ್ರಿ ಖಾಸಗಿ ಸಭಾಂಗಣದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು.ಈ ಸಂದರ್ಭ ಮಾತನಾಡಿದ ರಾಜ್ಯ ಕಂಡ ಉತ್ತಮ ಕ್ರಿಕೆಟ್ ವೀಕ್ಷಕ ವಿವರಣೆಗಾರ ಶಿವರಾಮ್ ಐತಾಳ್ ಕೋಟ, ಬಿಲ್ಲವ ಯುವಕರಿಗಾಗಿ ಹೆಜಮಾಡಿ ಬಿಲ್ಲವ ಬ್ರದರ್ಸ್ ಆಯೋಜಿಸಿದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಒಟ್ಟು ಎಂಟು ತಂಡಗಳು ಕಣದಲ್ಲಿದ್ದು, ಐಪಿಎಲ್ ಮಾದರಿಯಲ್ಲಿನಡೆಯಲಿರುವ ಈ ಪಂದ್ಯಾಕೂಟಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕ್ರಿಕೆಟ್ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಈ ಕೂಟವನ್ನು ಜಯಿಸಿದ ಪ್ರಥಮ ತಂಡಕ್ಕೆ ಎರಡು ಲಕ್ಷ ನಗದು ಹಾಗೂ ಬಿರುವೆರ್ ಟ್ರೋಫಿ-2022 ಹಾಗೂ ದ್ವಿತೀಯ ತಂಡಕ್ಕೆ ಒಂದು ಲಕ್ಷ ನಗದು ಹಾಗೂ ರನ್ನರ್ ಟ್ರೋಫಿ ನೀಡಲಾಗುವುದು ಎಂದರು.ಈ ಸಂದರ್ಭ ಬಿರುವೆರ್ ಬ್ರದರ್ಸ್ ಹೆಜಮಾಡಿ ಸಂಸ್ಥೆಯ ಅಧ್ಯಕ್ಷರು ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?