ಫನಾಶೆ ಟ್ಯಾಲೆಂಟೆಡ್ ಸೌಂದರ್ಯ ಸ್ಪರ್ಧೆ : ಕಿರೀಟ ಮುಡಿಗೇರಿಸಿಕೊಂಡ ಹಿಂದಿ ನಟಿ ಸೋನಮ್

ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಫನಾಶೆ ಮಿಸೆಸ್ ಟ್ಯಾಲೆಂಟೆಡ್ ಸೌಂಧರ್ಯ ಸ್ಪರ್ಧೆಯಲ್ಲಿ ನಾಗಪುರದ ಹಿಂದಿ ನಟಿ ಹಾಗೂ ಮೋಡೆಲ್ ಸೋನಮ್ ಪ್ರಕಾಶ್ ಅವರು ಮಿಸ್ ಇಂಟಲೆಕ್ಚ್ವಲ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಆಪ್ ಕಿರೀಟವನ್ನು ಗೆದ್ದಿದ್ದಾರೆ.

ಸಮಾರಂಭದಲ್ಲಿ ಬಾಲಿವುಡ್ ಚಿತ್ರರಂಗದ ನಟರಾದ ರಾಹುಲ್ ರಾಯ್ , ಹುಸೇನ್ ಬಹುಮಾನ ಪ್ರಧಾನ ಮಾಡಿದರು. ಖ್ಯಾತ ಫ್ಯಾಶನ್ ಡಿಸೈನರ್ ವಿಶಾಲ್ ಕಪೂರ್ ಅವರು ಉಪಸ್ಥಿತರಿದ್ದರು.ನಟಿ ಸೋನಮ್ ಅವರು ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ